ರೈಲ್ವೆ ನಿಲ್ದಾಣದಲ್ಲಿ ಶೆಡ್ ಕುಸಿದು ಹಲವು ಪ್ರಯಾಣಿಕರಿಗೆ ಗಾಯ

ಶುಕ್ರವಾರ, 8 ಸೆಪ್ಟಂಬರ್ 2023 (17:20 IST)
ಉತ್ತರ ಪ್ರದೇಶದ ರೈಲು ನಿಲ್ದಾಣದಲ್ಲಿ ಟಿನ್ ಶೆಡ್ ಕುಸಿದು ಹಲವು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಸಿ ರೈಲು ನಿಲ್ದಾಣದಲ್ಲಿ ನಿನ್ನೆ  ತಡರಾತ್ರಿ ಪ್ರಯಾಣಿಕರು ರೈಲಿಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಟಿನ್ ಶೆಡ್ ಅಲುಗಾಡಲು ಪ್ರಾರಂಭಿಸಿದ ತಕ್ಷಣ ಅನೇಕ ಪ್ರಯಾಣಿಕರು ಓಡಿ ಹೊರಗೆ ಬಂದಿದ್ದಾರೆ, ಆದರೆ ಅಲ್ಲಿದ್ದ ತಂದೆ-ಮಗ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ಸರ್ಕಾರಿ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರ ಸಹಾಯದಿಂದ ಅವಶೇಷಗಳಿಂದ ಗಾಯಗೊಂಡವರನ್ನು ರಕ್ಷಿಸಿದ್ದಾರೆ. ನಂತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಇನ್ನು ಕೆಲವರನ್ನು ಖಾಸಗಿ ಆಸ್ಪತ್ರೆಗೆ ಕೂಡ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ