ಲವ್ ಹೆಸರಿನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ವಿವಾಹಿತ

ಭಾನುವಾರ, 15 ಮಾರ್ಚ್ 2020 (09:55 IST)
ಶಿವಮೊಗ್ಗ : 23 ವರ್ಷದ ವ್ಯಕ್ತಿಯೊಬ್ಬ ಲವ್ ಹೆಸರಿನಲ್ಲಿ ಮನೆಗೆ ಬರುತ್ತಿದ್ದ ತಂಗಿಯ ಸ್ನೇಹಿತಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಬಳಿಕ ಆಕೆಗೆ ವಂಚನೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಯುವಕ ತನ್ನ ತಂಗಿಯ ಜೊತೆ ಆಗಾಗ ಮನೆಗೆ ಬರುತ್ತಿದ್ದ ಅಪ್ರಾಪ್ತೆಯನ್ನು ಪ್ರೀತಿಸುವುದಾಗಿ ಹಾಗೂ ಮದುವೆಯಾಗುವುದಾಗಿ  ಹೇಳಿ ಬಳಿಕ ಬೇರೆ ಯುವತಿಯನ್ನು ಮದುವೆಯಾಗಿದ್ದಾನೆ. ಬಳಿಕ ಇಷ್ಟಕ್ಕೆ ಸುಮ್ಮನಾಗದ ಯುವಕ ಮದುವೆ ಬಳಿಕ ಮತ್ತೆ ಆಕೆಯ ಬೆನ್ನು ಹತ್ತಿ ನನಗೆ ಡಿವೋರ್ಸ್  ಆಗಿದೆ ಎಂದು ಸುಳ್ಳು ಹೇಳಿ, ಮತ್ತೆ ಪ್ರೀತಿಸುವ ನಾಟಕವಾಡಿ ಆಕೆಯನ್ನು ಬೆರೆ ಕಡೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

 

ಬಗ್ಗೆ ಅಪ್ರಾಪ್ತೆ ಕರ್ನಾಟಕ ಸಂರಕ್ಷಣಾ ವೇದಿಕೆ ಅಧ್ಯಕ್ಷರ ಸಹಾಯದಿಂದ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ ಬಂಧನಕ್ಕೆ ಬಲೆ ಬೀಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ