ರೈತ ದಸರಾ ಉದ್ಘಾಟಿಸಿದ ಮೇಯರ್ ರವಿಕುಮಾರ್

ಶುಕ್ರವಾರ, 22 ಸೆಪ್ಟಂಬರ್ 2017 (20:17 IST)
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಇಂದಿನಿಂದ ಮೂರು ದಿನಗಳ ಕಾಲ ಜೆ.ಕೆ.ಮೈದಾನದಲ್ಲಿ ರೈತ ದಸರಾ ನಡೆಯಲಿದೆ. ಈ ನಿಟ್ಟಿನಲ್ಲಿ ಅರಮನೆ ಮುಂಭಾಗ ಕೋಟೆ ಅಂಜನೇಯಸ್ವಾಮಿ ಮುಂಭಾಗ ರೈತದಸರಾ ಮೆರವಣಿಗೆಗೆ ಚಾಲನೆ ನೀಡಿದರು.

ರೈತರಿಗೆ ಉಪಯುಕ್ತವಾಗುವ ನೀರು ಸಂರಕ್ಷಣೆ, ತೋಟಗಾರಿಕೆ ಇಲಾಖೆ, ಕೃಷಿ ಅಭಿಯಾನ, ಕ್ಷೀರ ಭಾಗ್ಯ,ಮೀನುಗಾರಿಕೆ ಇಲಾಖೆಗಳ ಸ್ಥಬ್ಧ ಚಿತ್ರಗಳು, ಎತ್ತಿನ ಗಾಡಿ, ಸಾಕು ಪ್ರಾಣಿಗಳಾದ ಕುರಿ ಸೇರಿದಂತೆ ನಂದಿ ಕಂಬ, ಕುಂಭ ಹೊತ್ತ ಮಹಿಳೆಯರು, ಸಾಂಸ್ಕೃತಿಕ ಕಲಾ ತಂಡಗಳು ಎಲ್ಲರ ಗಮನ ಸೆಳೆಯಿತು. ಎತ್ತಿನಗಾಡಿ ಓಡಿಸುವ ಮೂಲಕ ಮೇಯರ್ ಎಂ.ಜೆ.ರವಿಕುಮಾರ್ ರೈತ ದಸರಾಗೆ ಚಾಲನೆ ನೀಡಿದರು.

ಇದೇವೇಳೆ ಮಾತನಾಡಿದ ಮೇಯರ್ ರವಿಕುಮಾರ್, ಈ ಬಾರಿ ದಸರಾ ಮಹೋತ್ಸವವನ್ನು ರೈತದಸರಾ ಎಂದು ಘೋಷಣೆ ಮಾಡಬೇಕೆಂದು ಬಯಸಿದ್ದೆವು. 15 ದಿನದಿಂದ ರಾಜ್ಯಾದ್ಯಂತ ಉತ್ತಮ ಮಳೆಯಾದ್ದರಿಂದ ಈ ದಸರಾವನ್ನು ರೈತರಿಗೆ ಸಮರ್ಪಿಸಬೇಕೆಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ