ಕಾಶ್ಮೀರಿ ಹಿಂದೂ ಸಾಂಸ್ಕತಿಕ ಕಲ್ಯಾಣ ಟ್ರಸ್ಟ್ ನ ಸದಸ್ಯರು ಜ ಕಾಶ್ಮೀರ ಭವನ ಮುಂಭಾಗ ಪ್ರತಿಭಟನೆ

ಭಾನುವಾರ, 10 ಅಕ್ಟೋಬರ್ 2021 (21:49 IST)
ಬೆಂಗಳೂರು: ಜಮ್ಮು- ಕಾಶ್ಮೀರದಲ್ಲಿ ನಡೆಯುತ್ತಿರುವ ಬ್ರಾಹ್ಮಣ, ಪಂಡಿತರ ಹತ್ಯೆ ಖಂಡಿಸಿ ಕಾಶ್ಮೀರಿ ಹಿಂದೂ ಸಾಂಸ್ಕತಿಕ ಕಲ್ಯಾಣ ಟ್ರಸ್ಟ್ ನ ಸದಸ್ಯರು ಜಯನಗರದಲ್ಲಿರುವ ಕಾಶ್ಮೀರ ಭವನ ಮುಂಭಾಗ ಭಾನುವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಆರ್.ಕೆ‌.ಮಟ್ಟು ಮಾತನಾಡಿ, ಕಾಶ್ಮೀರ ಕಣಿವೆಯಲ್ಲಿ 
ಮುಸ್ಲಿಮೇತರ ಅಲ್ಪಸಂಖ್ಯಾತರನ್ನು, ಅದರಲ್ಲೂ ಬ್ರಾಹ್ಮಣ ಹಾಗೂ ಪಂಡಿತರನ್ನು ಕಳೆದ 10 ದಿನಗಳಿಂದ ಹತ್ಯೆ ಮಾಡುತ್ತಿದ್ದಾರೆ ಎಂದರು.
ನಾಲ್ವರು ಇಸ್ಲಾಮಿಕ್ ಭಯೋತ್ಪಾದಕರು ಐವರು ಹಿಂದೂ ಪಂಡಿತರನ್ನು ಹತ್ಯೆ ಮಾಡಿದ್ದಾರೆ. ಕೊಲೆಗಳ ಹೊಣೆಗಾರಿಯನ್ನು ಲಷ್ಕರಿ ತೋಯ್ಬ ಹೊತ್ತುಕೊಂಡಿದೆ. ಇಂತಹ ಅರಾಜಕತೆ ಕಾಶ್ಮೀರಿ ಕಣಿವೆಯಲ್ಲಿ ಸೃಷ್ಟಿಯಾಗಿದೆ. ತಕ್ಷಣವೇ ಸರ್ಕಾರ ಮಧ್ಯ ಪ್ರವೇಶಿಸಿ ಉಗ್ರಗಾಮಿಗಳನ್ನು ಹೊರ ಹಾಕಬೇಕು. ಉಗ್ರಗಾಮಿಗಳ ಪರ ಮಾತನಾಡುವ ಮುಸ್ಲಿಮರ ವಿರುದ್ಧ ಕ್ರಮಕೈಗೊಳ್ಳಬೇಕು. ಪರಿಸ್ಥಿತಿ ನಿಯಂತ್ರಿಸಬೇಕು. ಜನರು ವಿಶ್ವಾಸ ಕಳೆದುಕೊಂಡಿದ್ದು, ವಿಶ್ವಾಸಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ನಾಲ್ಕು ದಶಕದ ಹಿಂದಿನ ದಾಳಿ ನೆನಪಿಸುತ್ತಿರುವ ಉಗ್ರರು:
1970 ರಲ್ಲಿ ಉಗ್ರರು ಕಾಶ್ಮೀರದ ಕಣಿವೆಯಲ್ಲಿ ವಾಸಿಸುವ ಪಂಡಿತರು ಹಾಗೂ ಬ್ರಾಹ್ಮಣರನ್ನು ಕೊಲೆ ಗೈದಿದ್ದರು. ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಿ, ಕ್ರೂರತೆ ಮೆರೆದಿದ್ದರು. ಭಯ ಹುಟ್ಟಿಸುವ ಕೆಲಸದಿಂದ, ಅಸುರಕ್ಷತೆ ವಾತಾವರಣ ನಿರ್ಮಿಸಿದ್ದರು. ಇಷ್ಟೇಲ್ಲ ಮಾಡಿದರೂ ಅಂದಿನ ಸರ್ಕಾರ ಕೈಕಟ್ಟಿ ಕುಳಿತುಕೊಂಡಿತೇ ಹೊರತು ಹಿಂದೂಗಳ ಹತ್ಯೆಗೆ ಕ್ಯಾರೆ ಎನ್ನಲಿಲ್ಲ. ಆ ಘಟನೆಯನ್ನು ಮರುಕಳಿಸಲು ಉಗ್ರರು ಸಂಚು ರೂಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ