ವಿಧಾನ ಪರಿಷತ್ ಚುನಾವಣೆ; 1334 ಮಂದಿ ಮತದಾರರು

ಬುಧವಾರ, 17 ನವೆಂಬರ್ 2021 (20:33 IST)
ಕರ್ನಾಟಕ ವಿಧಾನ ಪರಿಷತ್ ಕೊಡಗು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಈಗಾಗಲೇ ದಿನಾಂಕ ಪ್ರಕಟವಾಗಿದ್ದು, ಆ ದಿಸೆಯಲ್ಲಿ ಚುನಾವಣೆ ಸಂಬಂಧ ನಾಮಪತ್ರ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನವೆಂಬರ್, 23 ರವರೆಗೆ ಜಿಲ್ಲಾಡಳಿತ ಭವನದ 3 ನೇ ಮಹಡಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಬಹುದಾಗಿದೆ. (ನವೆಂಬರ್, 21 ಮತ್ತು 22 ರಂದು ಸಾರ್ವಜನಿಕ ರಜೆ ದಿನಗಳನ್ನು ಹೊರತುಪಡಿಸಿ) ನಾಮಪತ್ರಗಳನ್ನು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.  
ನಾಮಪತ್ರ ಸಲ್ಲಿಸಲು ಬೇಕಾದ ಅರ್ಹತೆಗಳು ಮತ್ತು ದಾಖಲೆಗಳ ವಿವರ:- ನಮೂನೆ-2ಇ ರಲ್ಲಿ ನಾಮಪತ್ರ. (ಭರ್ತಿ ಮಾಡಿ ಅಭ್ಯರ್ಥಿ ಮತ್ತು ಸೂಚಕರ ಸಹಿ ಇರಬೇಕು). ನಮೂನೆ-26ರಲ್ಲಿ ಅಫಿಡವಿಟ್. (ರೂ. 20/- ಛಾಪಾ ಕಾಗದದಲ್ಲಿ ರಲ್ಲಿ 3 ಪ್ರತಿ ನೀಡುವುದು ಮತ್ತು ಅಭ್ಯರ್ಥಿಯು ಅಫಿಡವಿಟ್ನ.ಲ್ಲಿ ಎಲ್ಲಾ ಪುಟಗಳಿಗೆ ಸಹಿ ಮಾಡಿರಬೇಕು. ಅಫಿಡವಿಟ್ನ  ಎಲ್ಲಾ ಕಾಲಂಗಳನ್ನು ಭರ್ತಿ ಮಾಡಿರಬೇಕು. ನೋಟರಿ ಪಬ್ಲಿಕ್ರಿಂ ದ ದೃಢೀಕರಿಸಿರಬೇಕು). ರಾಜಕೀಯ ಪಕ್ಷದ ಅಭ್ಯರ್ಥಿಯಾದಲ್ಲಿ ನಮೂನೆ-ಎಎ ಮತ್ತು ಬಿಬಿ ಸಲ್ಲಿಸುವುದು. ಪಾಸ್ಪೋಎರ್ಟ್ ಅಳತೆಯ ಎರಡು ಭಾವಚಿತ್ರ. (ಭಾವಚಿತ್ರದ ಹಿಂಬದಿಯಲ್ಲಿ ಅಭ್ಯರ್ಥಿಯು ಸಹಿ ಮಾಡಿರಬೇಕು). 
     ಠೇವಣಿ ರೂ. 10 ಸಾವಿರ ಮತ್ತು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಯಾದಲ್ಲಿ ರೂ.5 ಸಾವಿರ, ಅಭ್ಯರ್ಥಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. 10 ಜನ ಸೂಚಕರು ಆಗಿರಬೇಕು. ಪ್ರಮಾಣ ವಚನದ ನಮೂನೆ. ಅಭ್ಯರ್ಥಿಯು ವಿಧಾನಸಭಾ ಮತದಾರರ ಪಟ್ಟಿಯ ದೃಢೀಕೃತ ಪ್ರತಿಯನ್ನು ಸಲ್ಲಿಸುವುದು. ಅಭ್ಯರ್ಥಿಯ ವಯಸ್ಸು 30 ವರ್ಷಕ್ಕಿಂತ ಕಡಿಮೆ ಇರಬಾರದು. ಅಭ್ಯರ್ಥಿಯ ಮಾದರಿ ಸಹಿಯಿರುವ ನಮೂನೆ. ಅಭ್ಯರ್ಥಿಯ ಹೆಸರು ಮತಪತ್ರದಲ್ಲಿ ಹೇಗೆ ನಮೂದಿಸಬೇಕು ಎಂಬ ಬಗ್ಗೆ ನಮೂನೆ (ಕನ್ನಡ ಮತ್ತು ಆಂಗ್ಲಭಾಷೆ). ಅಭ್ಯರ್ಥಿಯು ಭಾವಚಿತ್ರವನ್ನು ನೀಡಿರುವ ಬಗ್ಗೆ ದೃಢೀಕರಣ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಚೇರಿಗೆ ಅಭ್ಯರ್ಥಿ ಸೇರಿದಂತೆ 5 ಜನ ಮಾತ್ರ ಪ್ರವೇಶಕ್ಕೆ ಅನುಮತಿ ಇರುತ್ತದೆ.
        ವಿಧಾನ ಪರಿಷತ್ ಚುನಾವಣೆ ಸಂಬಂಧ 654 ಪುರುಷರು, 689 ಮಹಿಳೆಯರು  ಒಟ್ಟು 1334 ಮಂದಿ ಮತದಾರರು ಇದ್ದು, ಜಿಲ್ಲೆಯಾದ್ಯಂತ ಒಟ್ಟು 108 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 103 ಗ್ರಾಮ ಪಂಚಾಯಿತಿ ಕಚೇರಿಗಳು (ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಹೊರತುಪಡಿಸಿ), ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿಗಳು, ಮಡಿಕೇರಿಯ ಕಾವೇರಿ ಕಲಾಕ್ಷೇತ್ರ (ನಗರಸಭೆ), ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಕಚೇರಿ, (ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯರಿಗೆ) ಇಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ