ರಾಮನಗರದಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯವಾದ ದಿನದಂದು ಕೇವಲ 10 ಲಕ್ಷ ರೂ. ಬದಲಾವಣೆ ಮಾಡಿದ್ದಾರೆ. ಅದನ್ನೆ ವಿರೋಧ ಪಕ್ಷ ತಮ್ಮ ಪ್ರಭಾವ ಬಳಸಿ ನಮ್ಮನ್ನು ಸಿಲುಕಿಸಲು ಹುನ್ನಾರು ನಡೆಸುತ್ತಿದೆ ಎಂದು ದೂರಿದರು. ನಮ್ಮ ಪಿಎಗಳನ್ನು ಕರೆದು ವಿಚಾರಣೆ ಮಾಡುತ್ತಲೇ ಇದ್ದಾರೆ. ಬಿಜೆಪಿಯವರು ಇನ್ನೂ ನಿದ್ದೆ ಮಾಡುತ್ತಿಲ್ಲ. ಅವರಿಗೆ ನಿದ್ದೆ ಕೂಡ ಬರುತ್ತಿಲ್ಲ ಎಂದು ಟಾಂಗ್ ನೀಡಿದರು.
ಅಧಿಕಾರದ ಮಾತು ಜಾಸ್ತಿ:
ನಮ್ಮ ಕ್ಷೇತ್ರದ ಕೆಲವು ಜನಪ್ರತಿನಿಧಿಗಳಿಗೆ ಅಧಿಕಾರದ ಮಾತು ಜಾಸ್ತಿಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಕೆಲವರು ಮಾತನ್ನು ಕಡಿಮೆ ಮಾಡಿಕೊಳ್ಳಬೇಕು. ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಅದೇ ಪಕ್ಕದ ರಾಮನಗರದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹೆಚ್.ಡಿ.ಕೆಗಿಂತ ಎ.ಮಂಜು ದೊಡ್ಡವನಾ? ಎಂದು ಸಚಿವ ಡಿಕೆಶಿ ತಿರುಗೇಟು ನೀಡಿದ್ದಾರೆ.