ಮೃತ ಸಚಿನ್ ಮಾನಪ್ಪ ಮನೆಗೆ ಸಚಿವ ಈಶ್ವರ ಖಂಡ್ರೆ ಭೇಟಿ: 10 ಲಕ್ಷ ಪರಿಹಾರ ಘೋಷಣೆ

Sampriya

ಭಾನುವಾರ, 29 ಡಿಸೆಂಬರ್ 2024 (17:05 IST)
Photo Courtesy X
ಕಟ್ಟಿ ತೂಗಾಂವ್ (ಬೀದರ್ ಜಿಲ್ಲೆ): ಗ್ರಾಮದ ಮೃತ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.  ಈ ಸಂದರ್ಭದಲ್ಲಿ ಸಚಿನ್ ಸಹೋದರಿಯರು  ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಚಿನ್ ಸಾವಿಗೂ ಮುನ್ನ ಆತನನ್ನು ಹುಡುಕಿಕೊಡುವಂತೆ ಠಾಣೆಗೆ ಹೋದಾಗ ಪೊಲೀಸರು ತಮಗೆ ಸ್ಪಂದಿಸಲಿಲ್ಲ. ನಮ್ಮ ದೂರಿನಂತೆ ಅವರು ಹುಡುಕಿದ್ದರೆ ಆತ್ಮಹತ್ಯೆ ತಡೆಯಬಹುದಿತ್ತು. ಡೆತ್ ನೋಟ್‌ನಲ್ಲಿದ್ದವರನ್ನು ಬಂಧಿಸದ ಪೊಲೀಸರು ಈಗೇಕೆ ಬಂದಿದ್ದಾರೆ. ಮೊದಲು ಅವರನ್ನು ಹೊರಗೆ ಕಳಿಸಿ ಎಂದು ಸಚಿವರ ಸಮ್ಮುಖದಲ್ಲೇ ಆಕ್ರೋಶ ಹೊರಹಾಕಿ ಪಟ್ಟು ಹಿಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮೆಗೌಡ ಸೇರಿದಂತೆ ಇತರೆ ಪೊಲೀಸರು ಮನೆಯಿಂದ ಹೊರಹೋದರು.

ಬಳಿಕ ಈಶ್ವರ ಬಿ. ಖಂಡ್ರೆ ಅವರು ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ವೈಯಕ್ತಿಕ ಹಾಗೂ ಸರ್ಕಾರದಿಂದ ಜಂಟಿಯಾಗಿ ಹತ್ತು ಲಕ್ಷ ಪರಿಹಾರ ಕುಟುಂಬಕ್ಕೆ ನೀಡಲಾಗುವುದು. ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಿಸುವುದರ ಬಗ್ಗೆ ಸಿಎಂ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ