ನಗರ ಪ್ರದಕ್ಷಿಣೆ ಹೊರಟ ಸಚಿವರಿಗೆ ಜನರ ತರಾಟೆ

ಶನಿವಾರ, 19 ಆಗಸ್ಟ್ 2017 (10:33 IST)
ಬೆಂಗಳೂರು: ರಾಜಧಾನಿಯಲ್ಲಿ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಈ ಹಿನ್ನಲೆಯಲ್ಲಿ ರಾಜ್ಯಸರ್ಕಾರದ ಪರವಾಗಿ ನಗರ ಪ್ರದಕ್ಷಿಣೆ ಹೊರಟ, ಸಚಿವ ಕೆಜೆ ಜಾರ್ಜ್ ಮತ್ತು ರಾಮಲಿಂಗಾ ರೆಡ್ಡಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

 
ಎಸ್ ಡಿ ಲೇಔಟ್ ಗೆ ಭೇಟಿ ಕೊಟ್ಟ ಸಚಿವರಿಗೆ ಜನರು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜಕಾಲುವೆಗಾಗಿ ಗೋಡೆ ಕೆಡವಿದ್ದರಿಂದಲೇ ತಮ್ಮ ಮನೆಗೆ ನೀರು ನುಗ್ಗಿದೆ. ಹೀಗಾಗಿ ನಷ್ಟಪರಿಹಾರ ಕೊಡಿಸಿ ಎಂದು ಆಗ್ರಹಿಸಿದ್ದಾರೆ.

ಆದರೆ ಸಂಪೂರ್ಣ ಪರಿಹಾರ ಸರ್ಕಾರದಿಂದ ಕೊಡಿಸಲಾಗದು ಎಂದ ಸಚಿವ ಜಾರ್ಜ್ ವಿರುದ್ಧ ಜನರು ಆಕ್ರೋಶಗೊಂಡರು. ಕೊನೆಗೆ ಸಚಿವ ರಾಮಲಿಂಗಾರೆಡ್ಡಿ ಸಮಾಧಾನಿಸಿದರಲ್ಲದೆ, ಗೋಡೆ ಕಾಮಗಾರಿ ನಡೆಯುವವರೆಗೆ ಪ್ರತಿದಿನ ಬಂದು ಕಾಮಗಾರಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ.. ಗಾಯಕ ಎಲ್ ಎನ್ ಶಾಸ್ತ್ರಿ ನೆರವಿಗೆ ಬಂದ ಜಗ್ಗೇಶ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ