ಕನ್ನಡ ಬರೆಯಲು ಬರಲ್ಲ ಎಂದು ಟ್ರೋಲ್ ಮಾಡಿದವರಿಗೇ ಸಚಿವ ಶಿವರಾಜ್ ತಂಗಡಗಿ ತರಾಟೆ
ಹೇಳಿಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಸಚಿವ. ಆದರೆ ಶಿವರಾಜ್ ತಂಗಡಗಿ ಇತ್ತೀಚೆಗೆ ಸರ್ಕಾರೀ ಶಾಲಾ ಕಾರ್ಯಕ್ರಮದಲ್ಲಿ ಶುಭವಾಗಲಿ ಎಂದು ಕನ್ನಡದಲ್ಲಿ ಬರೆಯಲು ಪರದಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದುಕೊಂಡೇ ಈ ರೀತಿ ಆಗಿದ್ದರೆ ಉಳಿದವರ ಕತೆ ಏನು ಎಂದು ಟ್ರೋಲ್ ಮಾಡಿದ್ದರು. ಇದು ಸಚಿವರ ಗಮನಕ್ಕೂ ಬಂದಿದ್ದು ಗರಂ ಆಗಿ ಮಾಧ್ಯಮಗಳ ಮುಂದೆ ಹರಿಹಾಯ್ದಿದ್ದಾರೆ.
ನಾನು ಅಷ್ಟೇನೂ ದಡ್ಡನಲ್ಲ. ಡಿಗ್ರಿ ಓದಿದವನು. ಪೂರಾ ಬರೆಯುವುದನ್ನು ನೋಡಲೂ ವಿಡಿಯೋ ಮಾಡಿದವರಿಗೆ ತಾಳ್ಮೆಯಿಲ್ಲ. ಕನ್ನಡ ಬರೆಯಲೂ ಬರಲ್ಲ ಎಂದರೆ ನಾನು ಇಷ್ಟು ಸಮಯ ಓದಿದ್ದೇನು. ಬರಿಯುವಾಗ ಏನು ಬರೆಯಬೇಕು ಎನ್ನುವ ಕಾಮನ್ ಸೆನ್ಸ್ ನನಗೂ ಇದೆ ಎಂದು ಕಿಡಿ ಕಾರಿದ್ದಾರೆ.