ಕೊಪ್ಪಳ: ಹೆಸರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಆದರೆ ಶಿವರಾಜ್ ತಂಗಡಗಿ ಕನ್ನಡದಲ್ಲಿ ಒಂದಕ್ಷರ ಬರೆಯಲು ತಡಕಾಡುವುದು ನೋಡಿ ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿಯ ಸರ್ಕಾರೀ ಶಾಲೆಯೊಂದಕ್ಕೆ ಭೇಟಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಕಾರ್ಯಕ್ರಮವೊಂದನ್ನು ಉದ್ಘಾಟಿಸಿ ಬೋರ್ಡ್ ಮೇಲೆ ಶುಭವಾಗಲಿ ಎಂಬ ಶಬ್ಧ ಬರೆಯಲು ಹೇಳಲಾಯಿತು.
ಅದರಂತೆ ಸಚಿವರು ಚೋಕ್ ತೆಗೆದುಕೊಂಡು ಬರೆಯಲು ಹೊರಟೇ ಬಿಟ್ಟರು. ಆದರೆ ಶು ಎಂಬ ಮೊದಲ ಪದ ಬರೆಯುವಷ್ಟರಲ್ಲಿ ಸುಸ್ತಾದರು. ಬಳಿಕ ಭ ಬದಲು ಇನ್ನೇನೋ ಬರೆದರು. ಅಲ್ಲಿದ್ದವರು ಸಚಿವರನ್ನು ತಿದ್ದಿ ಹಂಗೋ ಹಿಂಗೋ ಶುಭವಾಗಲಿ ಎಂದು ತಪ್ಪು ತಪ್ಪಾಗಿ ಬರೆದರು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಎಂಬ ಹೆಸರಿಟ್ಟುಕೊಂಡು ಕನ್ನಡದಲ್ಲಿ ಒಂದು ಪದ ಬರೆಯಲು ಬರಲ್ಲಾ ಎಂದರೆ ಉದ್ದಾರ ಎಂದು ಟೀಕಿಸಿದ್ದಾರೆ. ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರು ಶುಭವಾಗಲಿ ಎಂದು ಬರೆಯಲು ಕಷ್ಟಪಡುವುದು ನೋಡಿದರೆ ಕರುಳು ಚುರುಕ್ ಎನ್ನುತ್ತದೆ.
ಹುದಯವಾಯಿತು ಛೆಲುವ ಖನ್ನಡ ನಾಡು
ಮೊದಲು ಇವರಿಗೆ ಕನ್ನಡ ಕಳಿಸಿ ಹೊರರಾಜ್ಯದವರಿಗೆ ಆಮೇಲೆ ಹೇಳುವಿರಂತೆ ರೋಲ್ಕಾಲ್ ವೀರರೇ