ಸಚಿವ ಜಮೀರ್ ಮನೆಯಲ್ಲಿ ಅಡಗಿದ್ದಾರಾ ಐಎಂಎ ಹಗರಣದ ರೂವಾರಿ ಮನ್ಸೂರ್?

ಶನಿವಾರ, 15 ಜೂನ್ 2019 (19:13 IST)
ಐಎಂಎ ಸಂಸ್ಥೆಯ ಪ್ರಮುಖ ರೂವಾರಿ ಮನ್ಸೂರ್ ಅವರು ಸಚಿವ ಜಮೀರ್ ಅಹಮದ್ ಖಾನ್ ನಿವಾಸದಲ್ಲೇ ಅಡಗಿದ್ದರೂ ಅಚ್ಚರಿಯಿಲ್ಲ. ಹೀಗಂತ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ದೂರಿದ್ದಾರೆ.

ಎನ್.ರವಿಕುಮಾರ್ ಹೇಳಿಕೆ ನೀಡಿದ್ದು, ಐಎಂಎ ಸಂಸ್ಥೆಯ ಪ್ರಮುಖ ರೂವಾರಿ ಮನ್ಸೂರ್ ಅವರು ಸಚಿವ ಜಮೀರ್ ಅಹಮದ್ ನಿವಾಸದಲ್ಲೇ ಅಡಗಿದ್ದರೂ ಅಚ್ಚರಿಯಿಲ್ಲ. ಮೇಲಾಗಿ ಮನ್ಸೂರ್ ಸಾಲ ಪಡೆಯಲು ಸರ್ಕಾರದ ಗ್ಯಾರಂಟಿ ಕೊಡಿಸಲು ಇದೇ ಜಮೀರ್ ಅಹಮದ್ ಪ್ರಯತ್ನಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಾಗಿ ಮೊದಲು ಜಮೀರ್ ಅಹಮದ್ ರನ್ನು ಸಚಿವ ಸಂಪುಟದಿಂದ ವಜಾ ಮಾಡಿ, ಅವರನ್ನು ಬಂಧಿಸಬೇಕು ಎಂದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದರು.

ಇನ್ನು ಶಾಸಕ ಸಿ.ಟಿ.ರವಿ ಮಾತನಾಡಿ, ಅನಿಯಂತ್ರಿತ ಠೇವಣಿಗಳನ್ನು ಮುಟ್ಡುಗೋಲು ಹಾಕಿಕೊಳ್ಳುವ ಸಂಬಂಧ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ವಿಶೇಷ ಕಾಯ್ದೆಯೊಂದನ್ನು ರೂಪಿಸಿದೆ. ಇದರ ಆಧಾರದ ಮೇಲೆ ಐಎಂಎ ಹಗರಣದ ತನಿಖೆಗೆ ಎಸ್ ಐಟಿ ತನಿಖೆಯೂ ಸಹ ಕಾನೂನು ಬಾಹಿರವಾಗುತ್ತದೆ. ಈ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರ ನೇತೃತ್ವದ ಅರೆನ್ಯಾಯಿಕ ಸಮಿತಿ ರಚನೆ ಮಾಡಿ ಅವರ ಮೂಲಕ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ಜತೆಗೆ ಇದೇ ಮನ್ಸೂರ್ ಸಾಲ ಪಡೆಯಲು ಸರ್ಕಾರದ ಶ್ಯೂರಿಟಿ ಹಾಕಿಸಲು ಜಮೀರ್ ಅಹಮದ್ ಪ್ರಯತ್ನಿಸಿದ್ದರು. ಹಾಗಾಗಿ ಮೊದಲು ಜಮೀರ್ ಅಹಮದ್ ಬಂಧನವಾಗಬೇಕು ಎಂದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ