ಬೆಂಗಳೂರು: ಭಾರತಿನಗರ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಎಂಬಾತನ ಮರ್ಡರ್ ಕೇಸ್ ಗೆ ಸಂಬಂಧಿಸಿದಂತೆ ಕೆಆರ್ ಪುರಂ ಶಾಸಕ ಭೈರತಿ ಬಸವರಾಜ್ ಹೆಸರು ಕೇಳಿಬಂದಿದೆ.
ಈ ಮರ್ಡರ್ ಕೇಸ್ ನಲ್ಲಿ ಭೈರತಿ ಬಸವರಾಜ್ ಎ5 ಆರೋಪಿಯಾಗಿದ್ದಾರೆ. ಪ್ರಕರಣ ಸಂಬಂಧ ಬಿಕ್ಲು ಶಿವ ತಾಯಿ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಎ1, ಕಿರಣ್ ಎ2, ವಿಮಲ್ ಎ3, ಅನಿಲ್ ಎ4 ಆರೋಪಿಗಳಾಗಿದ್ದರೆ ಶಾಸಕ ಭೈರತಿ ಬಸವರಾಜ್ ಎ5 ಆರೋಪಿಯಾಗಿದ್ದಾರೆ.
ಕಿತ್ತಕನೂರಿನಲ್ಲಿ ಶಿವಪ್ರಕಾಶ್ ನಿವೇಶನವಿತ್ತು. ಇದನ್ನು ಮಾರಾಟ ಮಾಡಲು ಜಗದೀಶ್ ಮತ್ತು ಇತರರು ಬೆದರಿಕೆ ಹಾಕಿದ್ದರು ಎಂದು ಶಿವಪ್ರಕಾಶ್ ಫೆಬ್ರವರಿಯಲ್ಲಿ ಪೊಲೀಸರಿಗೂ ದೂರು ನೀಡಿದ್ದ. ಈ ಗಲಾಟೆಯಲ್ಲಿ ಶಿವಪ್ರಕಾಶ್ ನನ್ನು ಜಗದೀಶ್ ಮತ್ತು ಇತರರು ಕೊಲೆ ಮಾಡಿದ್ದಾರೆ ಎನ್ನುವುದು ಆರೋಪವಾಗಿದೆ.
ಈ ಪ್ರಕರಣದಲ್ಲಿ ಭೈರತಿ ಬಸವರಾಜ್ ಹೆಸರೂ ಥಳುಕು ಹಾಕಿಕೊಂಡಿದೆ. ಇದೀಗ ಶಿವಪ್ರಕಾಶ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.