ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಕಠಿಣ ಕ್ರಮ: ಲೋಕಾಯುಕ್ತ

ಶುಕ್ರವಾರ, 14 ಏಪ್ರಿಲ್ 2017 (12:31 IST)
ಕಳೆದ ವರ್ಷದ ಆರ್ಥಿಕ ವಿವರ ಸಲ್ಲಿಸದ ಎಂಟು ಮಂದಿ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
 
ಹಿಂದಿನ ವರ್ಷ ಆರ್ಥಿಕ ವಿವರ ಸಲ್ಲಿಸದವರಲ್ಲಿ ವಿಧಾನಪರಿಷತ್ ಸದಸ್ಯರಾದ ಎನ್‌.ಅಪ್ಪಾಜಿಗೌಡ, ಕಾಂತರಾಜು, ಡಿ.ಯು.ಮಲ್ಲಿಕಾರ್ಜುನ್, ಚೌಡರೆಡ್ಡಿ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಫೈರೋಜ್ ನೂರುದ್ದೀನ್ ಸೇಠ್, ಬೀದರ್‌ನ ರಹೀಂಖಾನ್, ಕುಷ್ಟಗಿಯ ದೊಡ್ಡಹನುಮನಗೌಡ ಪಾಟೀಲ್ ಮತ್ತು ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಶಿವಮೂರ್ತಿ ಅವರಿದ್ದಾರೆ ಎಂದು ಲೋಕಾಯುಕ್ತ ಇಲಾಖೆ ತಿಳಿಸಿದೆ.
 
ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ರಾಜ್ಯಪಾಲರಿಗೆ ವರದಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
 
ಲೋಕಾಯುಕ್ತ ನಿಯಮದಂತೆ ರಾಜ್ಯದ ಎಲ್ಲಾ ಶಾಸಕರು ಮತ್ತು 75 ವಿಧಾನಪರಿಷತ್ ಸದಸ್ಯರು ಜೂನ್ 30ರೊಳಗಾಗಿ ಪ್ರಸಕ್ತ ವರ್ಷದ 2016-17 ಸಾಲಿನ ಆರ್ಥಿಕ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ