‘ಜೈ ಹಿಂದ್’ ಎಂದ ಪ್ರಿಯಾಂಕಾ ಚೋಪ್ರಾ ವಿರುದ್ಧ ದೂರು!

ಸೋಮವಾರ, 4 ಮಾರ್ಚ್ 2019 (09:06 IST)
ಮುಂಬೈ: ಭಾರತೀಯ ವಾಯು ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಜೈ ಹಿಂದ್’ ಎಂದು ಟ್ವೀಟ್ ಮಾಡಿದ್ದು ಇದೀಗ ಅವರಿಗೇ ಮುಳುವಾಗಿದೆ.


ಯೂನಿಸೆಫ್ ನ ರಾಯಭಾರಿಯಾಗಿರುವ ಪ್ರಿಯಾಂಕಾ ಈ ರೀತಿ ಟ್ವೀಟ್ ಮಾಡಿದ್ದು ತಪ್ಪು ಎಂದು ಪಾಕಿಸ್ತಾನದ ವ್ಯಕ್ತಿಯೊಬ್ಬರು ಪ್ರಿಯಾಂಕಾ ವಿರುದ್ಧ ದೂರು ನೀಡಿದ್ದಾರೆ.

‘ಎರಡು  ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ನಡುವಿನ ಯುದ್ಧದಿಂದ ಸಾವು ನೋವು ಸಂಭವಿಸುತ್ತದೆ. ಯೂನಿಸೆಫ್ ನ ರಾಯಭಾರಿಯಾಗಿ ಇಂತಹ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ತಟಸ್ಥವಾಗಿರಬೇಕು. ಆದರೆ ಪಾಕ್ ವಾಯು ಸೀಮೆ ಉಲ್ಲಂಘಿಸಿದ ಭಾರತೀಯ ಸೇನೆಯ ಪರವಾಗಿ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಅವರು ಈ ಸ್ಥಾನಕ್ಕೆ ಅರ್ಹರಲ್ಲ’ ಎಂದು ಪಾಕ್ ನೆಟ್ಟಿಗರು ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ