ರಾಜ್ಯಾದ್ಯಂತ ಕೋಟಿ ಕೋಟಿ ಕಿಸಾನ್ ಸಮ್ಮಾನ್ ನಿಧಿ, ನಕಲಿ ರೈತರ ಖಾತೆ ಸೇರಿದೆ. 1 ಲಕ್ಷದ 99 ಸಾವಿರ ನಕಲಿ ರೈತರ ಖಾತೆಗಳಿಗೆ, ಕೇಂದ್ರ ಸರ್ಕಾರದಿಂದ 122 ಕೋಟಿ ಕಿಸಾನ್ ಸಮ್ಮಾನ್ ಹಣ ಪಾವತಿಸಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಕೇವಲ 81 ಲಕ್ಷ ರೂಪಾಯಿ ಮಾತ್ರ ನಕಲಿ ರೈತರಿಂದ ವಸೂಲಿ ಮಾಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಇನ್ನು 89,500 ನಕಲಿ ರೈತರಿಗೆ 34 ಕೋಟಿ ಹಣವನ್ನ ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯ ಸರ್ಕಾರ ಪಾವತಿಸಿತ್ತು. ಈ ಹಣವನ್ನೂ ಸಹ ಪೂರ್ಣ ಪ್ರಮಾಣದಲ್ಲಿ ಇಂದಿಗೂ ವಸೂಲಿ ಮಾಡಲಾಗಿಲ್ಲ. ಆನ್ ಲೈನ್ ಮೂಲಕ ರೈತರು ಕಿಸಾನ್ ಸಮ್ಮಾನ್ ನಿಧಿಗೆ ಅರ್ಜಿ ಸಲ್ಲಿಸಬೇಕು. ಆನ್ ಲೈನಲ್ಲಿ ನೆರೆ ರಾಜ್ಯದ ಕೆಲ ಸೈಬರ್ ಖದೀಮರು ಕಿಸಾನ್ ಸಮ್ಮಾನ ನಿಧಿಗೆ ಅರ್ಜಿ ಹಾಕಿದ್ದಾರೆ. ಸೂಕ್ತ ದಾಖಲೆ ಪರಿಶೀಲಿಸದೇ ಕೃಷಿ ಅಧಿಕಾರಿಗಳು ಆನಲೈನಲ್ಲಿ ಅರ್ಜಿ ಹಾಕಿದವರಿಗೆಲ್ಲ ಹಣ ಪಾವತಿಸಿ ಅಕ್ರಮ ಎಸಗಿದ್ದಾರೆ.
ಬಿಹಾರ, ಪಶ್ಚಿಮ ಬಂಗಾಳ, ಹರಿಯಾಣ ಸೇರಿ ಹೊರ ರಾಜ್ಯದ ನಕಲಿ ರೈತರಿಗೆ ರಾಜ್ಯದ ಕಿಸಾನ್ ಸಮ್ಮಾನ್ ನಿಧಿ ಪಾವತಿಸಿದ್ದು ಬಯಲಾಗಿದೆ. ನಿಜವಾದ ಅನ್ನದಾತರಿಗೆ ಪಾವತಿಯಾಗಬೇಕಿದ್ದ ನೂರಾರು ಕೋಟಿ ಹಣ ಕಿಸಾನ್ ಸಮ್ಮಾನ್ ನಿಧಿ ಅನ್ಯರ ಖಾತೆಗೆ ಪಾವತಿಸಿ ಅಕ್ರಮವೆಸಗಲಾಗಿದೆ.