ಸಣ್ಣ ಊರಲ್ಲಿ 10 ಕ್ಕೂ ಹೆಚ್ಚು ಡೆಂಗ್ಯು ಕೇಸ್ : ಆರೋಗ್ಯ ಇಲಾಖೆ ಅಧಿಕಾರಿಗಳೇ ಮಾಯ

ಗುರುವಾರ, 7 ನವೆಂಬರ್ 2019 (21:21 IST)
ಒಂದೇ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಡೆಂಗ್ಯು ಆಗಿದೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನೇ ಆ ಊರಿನವರು ಹುಡುಕುವ ಸಂದರ್ಭ ಎದುರಾಗಿದೆ.

ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸದ್ಯ ಸಾಂಕ್ರಾಮಿಕ ಖಾಯಿಲೆಗಳು ತಾಂಡವ ಆಡುತ್ತಿದ್ದರೂ ಕೂಡ ಆರೋಗ್ಯ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದಲ್ಲಿ ಜನರು ಡೆಂಗ್ಯುದಿಂದ ಬಳಲುತ್ತಿದ್ದಾರೆ.

ರಡ್ಡೇರಟ್ಟಿ ಗ್ರಾಮದಲ್ಲಿ ಇರುವ ಎಸ್ ಟಿ ಕಾಲೋನಿಯಲ್ಲಿ ಸದ್ಯ ಹತ್ತಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಜ್ವರ ಬಂದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಹಲವು ಜನರು ಜೀವ ಭಯದಿಂದ ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದೆ.

ಆದರೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯದೇ ಜನರಿಗೆ ಜಾಗೃತಿ, ಧೈರ್ಯವನ್ನೂ ಹೇಳದೆ ಗ್ರಾಮದಲ್ಲಿ ಔಷಧ ಸಿಂಪಡಣೆಗೆ ಒತ್ತು ಕೊಡದೇ ಇರುವದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ