ಹಬ್ಬಕ್ಕೆ ಹೆಣ್ಮಕ್ಕಳಿಗೆ ಮುಜರಾಯಿ ಗಿಫ್ಟ್?

ಶುಕ್ರವಾರ, 5 ಆಗಸ್ಟ್ 2022 (12:31 IST)
ಬೆಂಗಳೂರು : ಹಬ್ಬ ಅಂದ್ರೆ ಸಾಕು, ಎಲ್ಲಾ ಕಡೆ ಸಂಭ್ರಮವೋ ಸಂಭ್ರಮ.

ಅದರಲ್ಲೂ ವರಲಕ್ಷ್ಮಿ ಹಬ್ಬ ಅಂದರೆ ಮಹಿಳೆಯರಿಗೆ ಖುಷಿ ಇಮ್ಮುಡಿಯಾಗುತ್ತೆ. ಅದನ್ನ ಇನ್ನಷ್ಟು ಹೆಚ್ಚಿಸಲು ಈ ಬಾರಿ ಮಹಿಳೆಯರಿಗೆ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಉಡುಗೊರೆ ಕೊಡಲು ಮುಜರಾಯಿ ಇಲಾಖೆ ನಿರ್ಧಾರ ಮಾಡಿದೆ.

ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬ ಮನೆ ಮಾಡಿದೆ. ಹಬ್ಬದ ದಿನ ಬೆಂಗಳೂರಿನ ಮುಜರಾಯಿ ದೇಗುಲಗಳಿಗೆ ಬರುವ ಮಹಿಳೆಯರಿಗೆ ಮುಜರಾಯಿ ಇಲಾಖೆ ಗಿಫ್ಟ್ ನೀಡುತ್ತಿದೆ.

ಬೆಂಗಳೂರಿನ ಎಲ್ಲಾ ದೇವಸ್ಥಾನಗಳಲ್ಲೂ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಕಸ್ತೂರಿ ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡುವಂತೆ ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಮುಜರಾಯಿ ದೇವಸ್ಥಾನಗಳ ವತಿಯಿಂದ ಮಹಿಳೆಯರಿಗೆ ವಿಶೇಷವಾಗಿ ಮಂಗಳದ್ರವ್ಯಗಳನ್ನು ಹಾಗೂ ಹಸಿರು ಬಳೆಗಳನ್ನು ನೀಡುವುದರ ಮೂಲಕ ಗೌರವಿಸಬೇಕು ಎನ್ನುವ ಉದ್ದೇಶದಿಂದ ಇತ್ತೀಚಿಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಸೂಚಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ