11 ತಿಂಗಳ ಮಗು ಸಹಿತ ಅಮ್ಮ ಆತ್ಮಹತ್ಯೆ!

ಬುಧವಾರ, 15 ಜೂನ್ 2022 (11:29 IST)
ದಾವಣಗೆರೆ : ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ  ಪತ್ನಿ  ತನ್ನ 11 ತಿಂಗಳ  ಮಗು ಸಮೇತ ಒಂದೇ ಕುಣಿಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
 
ಮಗು ಹಾಗು ತಾಯಿ ಒಂದೇ ಕುಣಿಕೆಯಲ್ಲಿ ನೇತಾಡುತ್ತಿದ್ದನ್ನು ಕಂಡ ಜನ ಮಮ್ಮಲ ಮರುಗಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿವಿಲ್ ಇಂಜಿನಿಯರ್ ಮನೋಜ್ ಕುಮಾರ್ ಪತ್ನಿ ಲಿಖಿತಾ ಹಾಗು ಅವರ 11 ತಿಂಗಳ ಮಗು ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಗಳು.

ಒಂದೂವರೆ ವರ್ಷಗಳ ಹಿಂದೆ ಮೃತ ಲಿಖಿತಾ ಅವರನ್ನು ಹಿರಿಯೂರು ತಾಲೂಕಿನ ಬಸಪ್ಪನಮಾಳಿಗೆ ಗ್ರಾಮದ ಡಿ.ಮನೋಜ್ಕುಮಾರ್ ಜೊತೆ ವಿವಾಹ ಮಾಡಿಕೊಡಲಾಗಿತ್ತು.

 
ಶಿಕ್ಷಕರಾದ ಡಿ.ವಿ.ಅಂಬುಜಾ ಮತ್ತು ಎ.ನಾಗರಾಜ್ ಎಂಬುವರ ಪುತ್ರಿ ಲಿಖಿತಾ (25) ರನ್ನು  ಇಂಜಿನಿಯರ್ ಮನೋಜ್ ಕುಮಾರ್ ಗೆ ಕೊಟ್ಟು ಮದುವೆ ಮಾಡಿದ್ದರು.

ಅವರಿಗೆ 11 ತಿಂಗಳ ಹಿಂದೆಷ್ಟೆ ಮಗುವಾಗಿತ್ತು.ಆ ಮಗುವಿಗೆ ಅನ್ವಿತ್ ಎಂದು ನಾಮಕರಣ ಮಾಡಿದ್ದರು. ಲಿಖಿತಾ ತನ್ನ 11 ತಿಂಗಳ  ಮಗುವನ್ನು ಬಿಡದೇ  ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

ಪತಿ ಡಿ.ಮನೋಜ್ಕುಮಾರ್ ಅಕ್ರಮ ಸಂಬಂಧ ಮತ್ತು ವರದಕ್ಷಿಣಿ ಕಿರುಕುಳದಿಂದ ಬೇಸತ್ತು ಲಿಖಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ತಾಯಿ ಅಂಬುಜಾ ಆರೋಪ ಮಾಡಿದ್ದಾರೆ.  

ಮನೋಜ್ಕುಮಾರ್ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಬೇರೆ ಹೆಣ್ಣುಮಕ್ಕಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಇದೇ ಕಾರಣಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಲಿಖಿತಾ ತಂದೆ ನಾಗರಾಜ್ ಆರೋಪಿಸಿದ್ದಾರೆ.

 
ನಿತ್ಯ ಫೋನ್ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ತನ್ನ ತಾಯಿಯ ಮಾತು ಕೇಳಿ ಇನ್ನು ಹೆಚ್ಚಿನ ಹಣ, ಒಡವೆಗಳನ್ನು ತರುವಂತೆ ಪೀಡಿಸುತ್ತಿದ್ದ ಹೀಗಾಗಿ ಮನನೊಂದ ಲಿಖಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಲಿಖಿತಾ ಪೋಷಕರು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ