ಮುಂಬೈ ನಂಜು : ಕಲಬುರಗಿಯಲ್ಲಿ ಒಂದೇ ದಿನ 61 ಕೊರೊನಾ ಕೇಸ್
ಮುಂಬೈ ನಂಜು ಕಲಬುರಗಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಿಸುತ್ತಿದೆ.
ಇವರೆಲ್ಲರೂ ಸರ್ಕಾರಿ ಕ್ವಾರಂಟೈನ್ ದಲ್ಲಿದ್ದು, ಸೋಂಕು ಪತ್ತೆಯಾದ ಕೂಡಲೆ ಇವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದರಿಂದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 251 ಕ್ಕೆ ಏರಿಕೆಯಾಗಿದ್ದು, 184 ಸಕ್ರೀಯ ರೋಗಿಗಳಾಗಿದ್ದಾರೆ ಎಂದು ಶರತ್ ಬಿ. ವಿವರಿಸಿದರು.
ಕೋವಿಡ್ – 19 ನಿಂದ ಗುಣಮುಖರಾದ 10 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.