ಮೈಸೂರು ಗಲಭೆಕೋರರು ಅಮಾಯಕರು, ಕೆಲವೇ ಮಂದಿ ಎಂದವರಿಗೆ ಠಕ್ಕರ್ ನೀಡಿದಂತಿದೆ ಈ ವರದಿ
ಮೈಸೂರು ಉದಯಗಿರಿ ಪೊಲೀಸ್ ಠಾಣೆ ಮುಂದೆ ಮೊನ್ನೆ ಕೆಲವೇ ಮಂದಿ ಅಲ್ಲ ಸಾವಿರ ಸಂಖ್ಯೆಯಲ್ಲಿ ಯುವಕರ ಗುಂಪು ಗಲಾಟೆ ಎಬ್ಬಿಸಲು ಸೇರಿತ್ತು ಎಂಬುದಕ್ಕೆ ಸಾಕ್ಷ್ಯವೆಂಬಂತೆ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಎಫ್ಐಆರ್ ನಲ್ಲೂ ಗಲಾಟೆಯ ತೀವ್ರತೆ ಉಲ್ಲೇಖಿಸಲಾಗಿದೆ. ಅಂದು ಸ್ವಲ್ಪವೇ ಮೈಮರೆತಿದ್ದರೂ ಪೊಲೀಸರ ಹೆಣ ಬೀಳುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದೇ ಕಾರಣಕ್ಕೇ ಘಟನೆಗೆ ಸಂಬಂಧಿಸಿದಂತೆ ನೂರಾರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಒಂದು ವಿಡಿಯೋದಿಂದ ಪ್ರಚೋದಿತರಾಗಿ ಅಲ್ಲಿ ಸೇರಿದ್ದವರಿಗೆ ನಿಜವಾಗಿ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಏನಿತ್ತು ಎಂಬುದೇ ಸರಿಯಾಗಿ ಮಾಹಿತಿಯಿತ್ತೋ ಇಲ್ವೋ ಗೊತ್ತಿಲ್ಲ. ಆದರೆ ಅಂದು ಗಲಾಟೆ ನಡೆಯುವಾಗ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದ ವಿಡಿಯೋಗಳು ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗಿವೆ.