ಸುಡು ಬಿಸಿಲಿದ್ರು ಮೈಸೂರು ಮೃಗಾಲಯದ ಪ್ರಾಣಿಗಳು ಮಾತ್ರ ಫುಲ್ ಜಾಲಿ ಯಾಕೆ ಗೊತ್ತಾ, Video

Sampriya

ಬುಧವಾರ, 8 ಏಪ್ರಿಲ್ 2026 (15:48 IST)
Photo Credit X
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಲೇ ಇದ್ದು, ಮನೆಯಿಂದ ಹೊರಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಇನ್ನೂ ಪ್ರಾಣಿಗಳು ಕೂಡಾ ಬಿಸಿಲ ತಾಪಕ್ಕೆ ಹೈರಾಣಾಗಿದ್ದಾರೆ. ಆದರೆ ಮೈಸೂರಿನ ಮೃಗಾಲಯದಲ್ಲಿ ಈ ಬಿಸಿಲ ತಾಪ ಪ್ರಾಣಿಗಳು ಪಾತ್ರ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಮೃಗಾಲಯದಲ್ಲಿ ಪ್ರಾಣಿಗಳ ಬೇಸಿಗೆ ಆರೈಕೆಗೆ ತೆಗೆದುಕೊಂಡ ಕ್ರಮ.  ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. 

ಮೃಗಾಲಯದಲ್ಲಿ ಪ್ರಾಣಿಗಳಿಗೆ ಆರಾಮದಾಯಕ ಫೀಲ್ ಕೊಡಲು ಮಾಂಸಹಾರಿ ಪ್ರಾಣಿಗಳಿಂದ ಸಸ್ಯಹಾರಿ ಪ್ರಾಣಿಗಳವರೆಗೂ ತಂಪಾದ ವಾತಾವರಣ ನೀಡಲು ಸ್ಪಿಕ್ಲರ್‌ ಅನ್ನು ಹಾಕಲಾಗಿದೆ. ಅದಲ್ಲದೆ ಆಹಾರದಲ್ಲೂ ಬದಲಾವಣೆ ಮಾಡಲಾಗಿದೆ. ಸಮತೋಲನಕ್ಕೆ ಎಳನೀರು, ಐಸ್ ಬ್ಲಾಕ್ಸ್‌, ಪ್ರೋಜನ್‌ ತಿನಿಸುಗಳು ಕೂಲ್ ಫೀಲ್ ನೀಡುತ್ತಿದೆ.

ಈ ನೀರಿನಲ್ಲಿ ಪ್ರಾಣಿಗಳು ಆಟವಾಡಿ, ಬರುವ ಪ್ರವಾಸಿಗರಿಗೂ ಖುಷಿಯನ್ನು ನೀಡುತ್ತಿದೆ. 

ಈ ಮೂಲಕ ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಬೇಸಿಗೆ ಆರೈಕೆಯನ್ನು ವಿಶೇಷವಾಗಿ ಮಾಡಲಾಗುತ್ತಿದೆ. 
 
 
 
 
View this post on Instagram
 
 
 
 
 
 
 
 
 
 
 

A post shared by Sri Chamarajendra Zoological Gardens, Mysuru (@mysuru_zoo)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ