ನಲಪಾಡ್ ಅವರು ರೈತರನ್ನು ಉದ್ದೇಶಿಸಿ ಮಾತನಾಡುತ್ತಾ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದರು. ಈ ವೇಳೆ ರೈತನೊಬ್ಬ ಮಧ್ಯ ಪ್ರವೇಶಿಸಿ, ವಿರೋಧಿಸಲು ಮುಂದಾದಾಗ, ಆತನಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಏಕವಚನದಲ್ಲಿ ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ವಿವರಣೆಗೆ ಬರುವುದಾದರೆ, ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ನಾವು ಹೇಳಿದ್ದಲ್ಲ. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರೇ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಅಲ್ಲದೆ, ಅವರದೇ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಜೀವ ಹೋಗಿದ್ದು ಕೂಡ ಇವರ 40 ಪರ್ಸೆಂಟ್ ಕಮಿಷನ್ನಿಂದ ಎಂದು ನಲಪಾಡ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ವೇದಿಕೆ ಪಕ್ಕದಲ್ಲಿದ್ದ ರೈತನೊಬ್ಬ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇದರಿಂದ ಸಿಟ್ಟಿಗೆದ್ದ ನಲಪಾಡ್, ಯಾವನೋ ಅವನು ಕುಡಿದು ಬಿಟ್ಟು ಹೇಳುವುದನ್ನು ಕೇಳಿ ನೀವು ಟೆನ್ಸನ್ ತೆಗೆದುಕೊಳ್ಳಬೇಡಿ. ನಾನು ಹೇಳುವುದನ್ನು ಕೇಳಿ ಎಂದು ನಲಪಾಡ್ ಹೇಳುತ್ತಾರೆ.
ನಲಪಾಡ್ ಮಾತಿಗೆ ರೊಚ್ಚಿಗೆದ್ದ ಸಂವಾದದಲ್ಲಿ ಭಾಗಿಯಾಗಿದ್ದ ರೈತ, ಯಾವನೋ-ಗೀವನೋ ಅಂದ್ರೆ ಸರಿಯಿರಲ್ಲ ಎಂದು ಅವಾಜ್ ಹಾಕಿದರು. ಅಲ್ಲಿದ್ದ ಇತರೆ ರೈತರು ಎಷ್ಟೇ ಸಮಾಧಾನ ಪಡಿಸಿದರೂ ರೈತ ಸುಮ್ಮನಾಗದಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ, ರೈತನ ಸಮಾಧಾನ ಮಾಡಿದರು.