ಬಾಯ್ ಫ್ರೆಂಡ್ ಜೊತೆ ಸೇರಿಕೊಂಡು ಸಹೋದರನ ಕೊಲೆಗೇ ಸ್ಕೆಚ್ ಹಾಕಿದ ಸಹೋದರಿ
ಯುವತಿಯ ಪ್ರೇಮ ಸಂಬಂಧದ ಬಗ್ಗೆ ಸಹೋದರ ಆಕ್ಷೇಪ ವ್ಯಕ್ತಪಡಿಸಿದ್ದ. ಪೋಷಕರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದ. ಈ ಕಾರಣಕ್ಕೆ ಯುವತಿ ಗೆಳೆಯನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಳು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರು 16 ವರ್ಷದ ಸಹೋದರಿ ಮತ್ತು 12 ನೇ ತರಗತಿ ಓದುತ್ತಿರುವ ಆಕೆಯ ಅಪ್ರಾಪ್ತ ಬಾಯ್ ಫ್ರೆಂಡ್ ನನ್ನು ಬಂಧಿಸಿದ್ದಾರೆ.