ದೇಶದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ ಕೀರ್ತಿಗೆ ಪಾತ್ರವಾದ ನಮ್ಮ ಮೆಟ್ರೋ

ಗುರುವಾರ, 15 ಜೂನ್ 2017 (10:54 IST)
ಬೆಂಗಳೂರು: ನಮ್ಮ ಮೆಟ್ರೋ ಮೊದಲ ಹಂತದ ರೈಲು ಮಾರ್ಗಪೂರ್ಣಗೊಂಡು ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಈ ನಡುವೆ ನಮ್ಮೊ ಮೆಟ್ರೋ ದೇಶದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ ಎಂಬ ಕೀರ್ತಿಗೆ ಪಾತ್ರವಾಗಿದೆ. 
 
ಸಂಪಿಗೆ ರಸ್ತೆ-ಯಲಚೇನಹಳ್ಳಿ ಮಾರ್ಗವನ್ನು ಜೂನ್ 17ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಲೋಕಾರ್ಪಣೆ ಮಾಡಲಿದ್ದು, ಈಗಾಗಲೇ ಅಂತಿಮ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಈ ಮೆಟ್ರೋ ಮಾರ್ಗ ಉತ್ತರ ದಕ್ಷಿಣ ಕಾರಿಡಾರ್ ನ ಮೆಟ್ರೋ ಮಾರ್ಗ ನಾಗಸಂದ್ರದಿಂದ ಯಲಚೇನ ಹಳ್ಳಿಗೆ ಸಂಪರ್ಕ ಕಲ್ಪಿಸಲಿದ್ದು, ಒಟ್ಟು 23 ನಿಲ್ದಾಣಗಳನ್ನು ಹೊಂದಿದೆ. ನಮ್ಮ ಮೆಟ್ರೋ ಮೊದಲ ಹಂತದ ನಿರ್ಮಾಣಕ್ಕೆ ಈ ವರೆಗೂ ಒಟ್ಟು 14, 291 ಕೋಟಿ ರೂ.ಗಳು ವೆಚ್ಚವಾಗಿದೆ.
 
ನಮ್ಮ ಮೆಟ್ರೋದ ಮೊದಲ ಹಂತ ಒಟ್ಟು 42.3 ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿದ್ದು, ಒಟ್ಟು 40  ನಿಲ್ದಾಣಗಳನ್ನು ಹೊಂದಿದೆ.

 

ವೆಬ್ದುನಿಯಾವನ್ನು ಓದಿ