ತಿರುಪತಿ ಲಡ್ಡಿಗೆ ಮತ್ತೆ ನಂದಿನಿ ತುಪ್ಪ: ಬೆಂಗಳೂರಿನಿಂದ ಹೊರಟ ತುಪ್ಪದ ಟ್ರಕ್

Krishnaveni K

ಗುರುವಾರ, 29 ಆಗಸ್ಟ್ 2024 (11:01 IST)
ಬೆಂಗಳೂರು: ತಿರುಪತಿ ತಿಮ್ಮಪ್ಪನಿಗೆ ನೈವೇದ್ಯ ಮಾಡಲು ಲಡ್ಡುವಿಗೆ ಮತ್ತೆ ನಮ್ಮ ಹೆಮ್ಮೆಯ ನಂದಿನಿ ತುಪ್ಪ ಬಳಕೆಯಾಗಲಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ತುಪ್ಪದ ಟ್ರಕ್ ಕಳುಹಿಸಿಕೊಟ್ಟಿದ್ದಾರೆ.

ತಿರುಪತಿ ತಿಮ್ಮಪ್ಪನ ಲಡ್ಡುವಿಗೆ ಬಹಳ ವರ್ಷಗಳಿಂದಲೂ ನಂದಿನಿ ತುಪ್ಪ ಬಳಕೆಯಾಗುತ್ತಿತ್ತು. ಆದರೆ ಇದು ಕಳೆದ ಕೆಲವು ಸಮಯದಿಂದ ನಿಂತು ಹೋಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಕಿತ್ತಾಟವೂ ನಡೆದಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿಂತು ಹೋಗಿದೆ ಎಂದು ಬಿಜೆಪಿ ಆರೋಪಿಸಿದರೆ ಬಿಜೆಪಿ ಅವಧಿಯಲ್ಲೇ ನಿಲ್ಲಿಸಲಾಗಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿತ್ತು.

ಇದೀಗ ಮತ್ತೆ ತಿಮ್ಮಪ್ಪನಿಗೆ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತದೆ. ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದಕ್ಕೆ ನಮ್ಮ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದ್ದು, ತುಪ್ಪದ ಟ್ಯಾಂಕರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಚಾಲನೆ ನೀಡಿದರು. KMF ಅಧ್ಯಕ್ಷರಾದ ಭೀಮಾನಾಯಕ್ ಮತ್ತು KMF MD ಜಗದೀಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಇದರೊಂದಿಗೆ ವಿವಾದಗಳು ಅಂತ್ಯವಾಗಿದ್ದು ಮತ್ತೆ ತಿರುಪತಿ ತಿಮ್ಮಪ್ಪನಿಗೆ ನಮ್ಮ ನಂದಿನಿ ತುಪ್ಪ ಸರಬರಾಜಾಗಲಿದೆ. ನಂದಿನಿ ತುಪ್ಪ ಗುಣಮಟ್ಟ ಅತ್ಯುತ್ತಮವಾಗಿದ್ದು ಇದೇ ಕಾರಣಕ್ಕೆ ಲಡ್ಡು ತಯಾರಿಸಲು ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ