ನಾರ್ಕೋಟಿಕ್ಸ್ ಕ್ರೈಂ ಪೊಲೀಸರ ಬಲೆಗೆ ಬಿದ್ದ ಭೂಪ

ಮಂಗಳವಾರ, 9 ಜುಲೈ 2019 (18:35 IST)
ವಿವಿಧ ಠಾಣೆಗಳಲ್ಲಿ 11 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಿದ್ದ ಖತರ್ನಾಕ್ ಖಿಲಾಡಿಯನ್ನು ಬಂಧಿಸುವಲ್ಲಿ ಎಕನಾಮಿಕ್, ನಾರ್ಕೋಟಿಕ್ಸ್ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಕನಾಮಿಕ್, ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮಂಗಳೂರಲ್ಲಿ ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿಯನ್ನು ಬಂಧನ ಮಾಡಿದ್ದಾರೆ.

ರಹೀಂ ಯಾನೆ ಗೂಡ್ಸ್ ರಹೀಂ ಯಾನೆ ಕಂಡಿ ರಹೀಂ ಬಂಧಿತ ವ್ಯಕ್ತಿಯಾಗಿದ್ದಾನೆ. ಮಂಗಳೂರಿನ ಪಾಂಡೇಶ್ವರ ಶ್ರೀನಿವಾಸ್ ಕಾಲೇಜಿನ ಪಕ್ಕದಲ್ಲಿನ ಶ್ರೀ ರಾಂ ಗ್ಯಾರೇಜ್ ಬಳಿ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ರಹೀಂ ಆಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರಿಂದ 1 ಕೆಜಿ 100 ಗ್ರಾಂ ತೂಕದ ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆಕ್ಟಿವಾ ಹೋಂಡಾ, ಮೊಬೈಲ್, ಡಿಜಿಟಲ್ ತೂಕ ಮಾಪನ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿತನ ವಿರುದ್ಧ ಈಗಾಗಲೇ ಒಟ್ಟು  11  ಗಾಂಜಾ ಅಕ್ರಮ ಮಾರಾಟ ಸಂಬಂಧ ಪ್ರಕರಣಗಳು ದಾಖಲಾಗಿವೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ