ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಇಂದಿನಿಂದ ಚಾಲನೆ

geetha

ಭಾನುವಾರ, 3 ಮಾರ್ಚ್ 2024 (10:35 IST)
ಬೆಂಗಳೂರು- ಇಂದಿನಿಂದ ಮೂರು ದಿನಗಳ ಕಾಲ ಪಲ್ಸ್ ಪೋಲಿಯೋ ಅಭಿಯಾನ  ನಡೆಯಲಿದೆ.ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಶೇಷಾದ್ರಿಪುರಂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ.ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ನವೀನ್ ಭಟ್, ಬಿಬಿಎಂಪಿ ವಿಶೇಷ ಆಯುಕ್ತ ವಿಕಾಸ್ ಕಿಶೋರ್, ಮುಖ್ಯ ಆರೋಗ್ಯಾಧಿಕಾರಿ ಮತ್ತಿತರರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
 
ಇನ್ನೂ ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ೧೨ ವರ್ಷದಿಂದ ನಮ್ಮ ದೇಶದಲ್ಲಿ ಪೊಲೀಯೋ ರಹಿತ ದೇಶವಾಗಿದೆ.ಇದು ಹೀಗೆ ಮುಂದುವರೆಸುವುದು ನಮ್ಮ ಜವಾಬ್ದಾರಿ.ಈ ವರ್ಷ ಇಡೀ ದೇಶಾದ್ಯಂತ ೬೨ ವರೆ ಲಕ್ಷ ಮಕ್ಕಳಿಗೆ ಪೊಲೀಯೋ ಗಾಕಿಸುವ ಗುರಿಯಿದೆ.ಬೆಂಗಳೂರಿನಲ್ಲಿ ೧೧.ವರೆ ಲಕ್ಷ ಮಕ್ಕಳಿಗೆ ಪೊಲೀಯೋ ಹಾಕಿಸುವ ಕೆಲಸ ಮಾಡಲಾಗುತ್ತಿದೆ.ಇನ್ನೂ ಮೂರು ದಿನಗಳಲ್ಲಿ ನಮ್ಮ ಟಾರ್ಗೆಟ್ ಮುಟ್ಟಬೇಕು.ಅಂಗನವಾಡಿ ಕಾರ್ಯಕರ್ತರು, ವೈದ್ಯರು ಈ ಕೆಲಸಕ್ಕೆ ಶ್ರಮಿಸುತ್ತಿದ್ದಾರೆ.೫ ವರ್ಷದವರೆಗೂ ಮಕ್ಕಳಿಗೆ ಪೊಲೀಯೋ ವ್ಯಾಕ್ಸಿನ್ ಕಡ್ಡಾಯ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ