ಕುರುಬ ಸಮುದಾಯಕ್ಕೆ ಮಾತ್ರ ಎಸ್ ಟಿ ಸ್ಥಾನಮಾನ: ಸಿದ್ದರಾಮಯ್ಯ ಮೇಲೆ ನಾಯಕ ಸಮುದಾಯ ಮುನಿಸು

Krishnaveni K

ಗುರುವಾರ, 18 ಸೆಪ್ಟಂಬರ್ 2025 (11:00 IST)
ಬೆಂಗಳೂರು: ಕುರುಬ ಸಮುದಾಯಕ್ಕೆ ಮಾತ್ರ ಎಸ್ ಟಿ ಸ್ಥಾನಮಾನ ಕೊಟ್ಟಿದ್ದೀರಿ. ನಮ್ಮನ್ನು ಕಡೆಗಣಿಸಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಮೇಲೆ ನಾಯಕ ಸಮುದಾಯ ಸಿಟ್ಟಿಗೆದ್ದಿದೆ.
 

ಕುರುಬ ಸಮುದಾಯದವರಾದ ಸಿಎಂ ಸಿದ್ದರಾಮಯ್ಯ ತಮ್ಮ ಸಮುದಾಯವನ್ನು ಎಸ್ ಟಿ ವರ್ಗಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಪತ್ರ ಬರೆದಿದ್ದಾರೆ. ಆದರೆ ಇದಕ್ಕೆ ವಾಲ್ಮೀಕಿ ನಾಯಕ ಸಮುದಾಯದವರಿಂದ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಜೇನು ಕುರುಬ, ಕಾಡು ಕುರುಬ ಸಮುದಾಯಗಳು ಎಸ್ ಟಿ ವರ್ಗಕ್ಕೆ ಸೇರ್ಪಡೆಯಾಗಿವೆ.  ಈ ಕುರುಬ ಸಮುದಾಯವನ್ನೂ ಎಸ್ ಟಿ ವರ್ಗಕ್ಕೆ ಸೇರಿಸಿರುವುದಕ್ಕೆ ನಮ್ಮ ವಿರೋಧವಿದೆ ಎಂಬುದು ಅವರ ವಾದವಾಗಿದೆ.

ನಮ್ಮ ಸಮುದಾಯವನ್ನು ಸಿಎಂ ಕಡೆಗಣಿಸಿದ್ದಾರೆ. ಕುರುಬ ಸಮುದಾಯವನ್ನು ಪರಿಶಿಷ್ಠ ವರ್ಗಕ್ಕೆ ಸೇರಿಸಿದರೆ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಹೀಗೇ ಮುಂದುವರಿದರೆ ಮುಂದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ನಾಯಕ ಸಮುದಾಯ ಎಚ್ಚರಿಕೆಯನ್ನೂ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ