ಸಮ್ಮತಿ ಸೆಕ್ಸ್‌ಗೆ ವಯೋಮಿತಿ ಕಡಿತವಾಗುತ್ತಾ..!
ಪೋಕ್ಸೋ ಕಾಯ್ದೆಯಡಿ ಸಮ್ಮತಿಯ ಸೆಕ್ಸ್‌ಗೆ ಇರುವ 18 ವರ್ಷದ ವಯೋಮಿತಿಯನ್ನು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಕಾನೂನು ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ. ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಪೋಕ್ಸೋ ಕಾಯ್ದೆಯಡಿ ಸಮ್ಮತಿಯ ಸೆಕ್ಸ್ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸಬೇಕು ಎಂಬ ಅಭಿಪ್ರಾಯಗಳು ಹಲವು ವಲಯಗಳಿಂದ ಕೇಳಿಬಂದಿದ್ದವು. ಜೊತೆಗೆ ಇಂಥ ಬದಲಾವಣೆ ಆಗದೇ ಹೋದಲ್ಲಿ ಬಾಲಕಿಯರ ಸಮ್ಮತಿಯಿಂದಲೇ ಲೈಂಗಿಯ ಕ್ರಿಯೆ ನಡೆಸಿದ 18ಕ್ಕಿಂತ ಕೆಳಗಿನ ವಯೋಮಾನದ ಬಾಲಕರು ಕೂಡಾ ಕ್ರಿಮಿನಲ್ ಅಪರಾಧ ಹೊರಬೇಕಾಗಿ ಬಂದಿದೆ ಎಂಬ ವಾದಗಳು ಕೇಳಿಬಂದಿದ್ದವು. ಕರ್ನಾಟಕ ಹೈಕೋರ್ಟ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಾನೂನು ಆಯೋಗದ ಸಲಹೆ ಕೇಳಿದೆ.