ನಂದಿನಿ ಪಾರ್ಲರ್ ಗೆ ಬಂತು ಹೊಸ ದರದ ಹಾಲು, ಮೊಸರು, ಮಜ್ಜಿಗೆ ಪ್ಯಾಕೇಟ್
ನಂದಿನಿ ಪ್ಯಾಕೇಟ್ ಮೇಲೆ ಹೊಸ ದರ ಇರಲಿಲ್ಲ.ಹಳೆಯ ದರದ ಪ್ಯಾಕೆಟ್ ಮಾರಾಟ ಮಾಡ್ತಿದ್ದಾರೆಂದು ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಹೊಸ ದರದ ಹಾಲು, ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಬಂದಿದೆ.ಹಾಲಿನ ಪ್ರಾಡಕ್ಟ್ಗಳ ಮೇಲೆ ಹೊಸದವರು ಪ್ರಿಂಟ್ ಇದೆ.ನಿನ್ನೆ ವರೆಗೂ 45 ರೂಪಾಯಿ ಇರೋ ಹಾಲಿನ ಮಾರಾಟ ಮಾಡಲಾಗುತಿತ್ತು.ನಿನ್ನೆ ಹಳೆ ರೇಟ್ ಇರುವ ಹಾಲಿನ ಪ್ಯಾಕೆಟ್ ಗಳು ಹೊಸ ರೇಟ್ ಗಳಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು .ಇಂದು 48 ರೂಪಾಯಿ ಇರೋ ಹೊಸ ಹಾಲಿನ ಪ್ಯಾಕೆಟ್ ಬಂದಿದೆ.