ಹೊಸ ತಾಲೂಕು: ತಿಂಗಳ ಅಂತ್ಯದೊಳಗೆ ದಾಖಲೆ ವರ್ಗಾವಣೆ ಎಂದ ಸಚಿವ

ಶುಕ್ರವಾರ, 24 ಆಗಸ್ಟ್ 2018 (20:35 IST)
ರಾಜ್ಯದಲ್ಲಿ ಕಳೆದ ವರ್ಷದಲ್ಲಿ 50 ತಾಲೂಕುಗಳನ್ನು ರಚಿಸಲಾಗಿದೆ. ನೂತನವಾಗಿ ರಚಿಸಲಾದ ತಾಲೂಕುಗಳಲ್ಲಿ ಆಹಾರ, ಆರೋಗ್ಯ, ಪೊಲೀಸ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಸುಮಾರು 14 ಇಲಾಖೆಗಳು ಕಾರ್ಯಾರಂಭ ಮಾಡಬೇಕಾಗುತ್ತದೆ. ಅಗತ್ಯ ಸಿದ್ಧತೆಗಳು ಸಾಗಿವೆ ಎಂದು ಸಚಿವ ಹೇಳಿದ್ದಾರೆ.

ರಾಜ್ಯದಲ್ಲಿ ನೂತನವಾಗಿ ರಚನೆ ಮಾಡಲಾದ 50 ನೂತನ ತಾಲೂಕುಗಳಲ್ಲಿ ವಿವಿಧ ಇಲಾಖೆಗಳ ಹುದ್ದೆ ಸೃಜನೆಯಾಗಬೇಕು ಹಾಗೂ ಕಟ್ಟಡಗಳ ನಿರ್ಮಾಣವಾಗಬೇಕು. ನಿಟ್ಟಿನಲ್ಲಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನೂತನ ತಾಲೂಕುಗಳಲ್ಲಿ ಕಂದಾಯ ಇಲಾಖೆಗಳ ಕಚೇರಿಗಳು ಪ್ರಾರಂಭಗೊಂಡಿವೆ. ಭೂಮಿ ದಾಖಲೆಗಳು ವರ್ಗಾವಣೆ ಆಗಬೇಕಾಗಿದೆ. ಸುಮಾರು 37 ನೂತನ ತಾಲೂಕುಗಳಲ್ಲಿ ಭೂಮಿ ದಾಖಲೆಗಳು ಆಗಸ್ಟ್ ಅಂತ್ಯದವರೆಗೆ ವರ್ಗಾವಣೆಯಾಗಲಿವೆ ಎಂದು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ