ಪ್ರಧಾನಿ ಮೋದಿಯಿಂದ ಇಂದು ಭಾಷಣದ ದಾಖಲೆ

ಬುಧವಾರ, 15 ಆಗಸ್ಟ್ 2018 (10:39 IST)
ನವದೆಹಲಿ: ತಮ್ಮ ಈ ಸರ್ಕಾರದ ಅವಧಿಯ  ಕೊನೆಯ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ ಮೋದಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.
 

ಬೆಳಿಗ್ಗೆ 7.30 ಕ್ಕೆ ಧ್ವಜಾರೋಹಣ ಮಾಡಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ 8.55 ರವರೆಗೂ ಮಾತನಾಡಿದರು. ಈ ರೀತಿ ಸುದೀರ್ಘ ಅವಧಿಗೆ ಭಾಷಣ ಮಾಡಿ ಮೋದಿ ಹೊಸ ದಾಖಲೆ ಬರೆದರು.

ಒಟ್ಟು 82 ನಿಮಿಷಗಳ ಕಾಲ ಪ್ರಧಾನಿ ಮಾತನಾಡಿದರು. ಈ ಮೂಲಕ ಕಳೆದ ಐದು ವರ್ಷಗಳ ತಮ್ಮ ಅವಧಿಯಲ್ಲಿ ಅವರು ಮಾಡಿದ ಮೂರನೇ ಸುದೀರ್ಘ ಭಾಷಣ ಇದಾಯಿತು. ಲೋಕಸಭೆ ಚುನಾವಣೆಗೂ ಮೊದಲು ಬಂದ ಸ್ವಾತಂತ್ರ್ಯೋತ್ಸವದ ಭಾಷಣವನ್ನು ಮೋದಿ ಈ ರೀತಿ ಚೆನ್ನಾಗಿಯೇ ಬಳಕೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ