ಧಾರವಾಡ : ಮುಸ್ಲಿಮರು ಗೋಮಾಂಸ ತಿಂತಾರೆ. ದತ್ತಾತ್ರೇಯ ಪೀಠ ಪ್ರವೇಶಿಸಿ ಅವರು ಅಪವಿತ್ರ ಮಾಡುವುದಕ್ಕೆ ಅವಕಾಶ ಕೊಡಬಾರದು ಎಂದು ಶ್ರೀರಾಮ ಸೇನೆ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ನಗರದಲ್ಲಿ ಮಾತನಾಡಿದ ಅವರು, ನಿನ್ನೆ ಸಂಪುಟ ಸಭೆಯಲ್ಲಿ ದತ್ತಾತ್ರೇಯ ಪೀಠದ ಬಗ್ಗೆ ಒಂದು ನಿರ್ಣಯ ಕೈಗೊಂಡಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ. ಬಹಳ ವರ್ಷಗಳಿಂದ ಅಲ್ಲಿ ಹಿಂದೂ ಅರ್ಚಕನ ನೇಮಕ ಆಗಬೇಕು ಹಾಗೂ ತ್ರಿಕಾಲ ಪೂಜೆ ಆಗಬೇಕು ಎಂದಿತ್ತು.
ಅನಾಥವಾಗಿ ಬಿದ್ದಿದ್ದ ದತ್ತಾತ್ರೇಯ ಪೀಠದ ಪಾದುಕೆ ಪೂಜೆ ಆಗಬೇಕು ಎಂಬ ಬೇಡಿಕೆ ಇತ್ತು. ನಿನ್ನೆ ಅದಕ್ಕೆ ನಿರ್ಣಯ ತೆಗೆದುಕೊಂಡಿದ್ದು ಸ್ವಾಗತಾರ್ಹ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನಿರಂತರ ತ್ರಿಕಾಲ ಪೂಜೆ ಆದರೆ ಸರ್ವರಿಗೆ ಶಾಂತಿ, ಸಮಾಧಾನ, ಅಭಿವೃದ್ಧಿ ಸಿಗಲಿದೆ ಎಂಬ ನಂಬಿಕೆ ಇದೆ.
ಈವರೆಗೆ ಆಗದೆ ಇರುವ ತ್ರಿಕಾಲ ಪೂಜೆಯು ಸರ್ಕಾರ ತೆಗೆದುಕೊಂಡ ನಿರ್ಣಯದಿಂದ ಆಗಬೇಕು. ಮುಸ್ಲಿಮರು ಮುಜಾವರ್ನಲ್ಲಿ ಮತ್ತೆ ಬಂದು ಅಪವಿತ್ರ ಮಾಡುವುದು ಬೇಡ. ಅವರು ಗೋಮಾಂಸ ತಿಂತಾರೆ, ದೇವರನ್ನು ನಂಬಲ್ಲ.
ನಾಸ್ತಿಕವಾದಿಗಳು, ಅಲ್ಲಾ ಒಬ್ಬನೇ ದೇವರು, ಉಳಿದವರು ಕಾಫಿರ್ ಎನ್ನುವವರಿಗೆ ಅಲ್ಲಿ ಪ್ರವೇಶ ಬೇಡ. ಅವರು ಪ್ರವೇಶ ಮಾಡಿದರೆ ಅಪವಿತ್ರ ಆಗಲಿದೆ ಎಂದು ತಿಳಿಸಿದ್ದಾರೆ.