ಇಂಟರ್ನೆಟ್ ಸಂಪರ್ಕ ಬೇಡ ಎಂದಿದ್ದಕ್ಕೆ ಬಿಯರ್ ಬಾಟಲ್ ನಿಂದ ಹೊಡೆಯೋದಾ
ವಿಶ್ವದಾದ್ಯಂತ ಕೊರೋನಾ ಭೀತಿಯಲ್ಲಿ ಜನರು ತತ್ತರಿಸಿ ಹೋಗಿದ್ರೆ, ಇಲ್ಲೋರ್ವ ಇಂಟರ್ನೆಟ್ ಪ್ರೋವೈಡರ್ ಮಾಲೀಕನಿಗೆ ಪಿಜಿ ಯವರು ಇಂಟರ್ನೆಟ್ ಸಂಪರ್ಕ ತೆಗೆದುಕೊಳ್ಳಲು ನಿರಾಕರಣೆ ಮಾಡಿದ್ದಾರೆನ್ನುವ ಚಿಂತೆಯಾಗಿದೆ.
ತಡರಾತ್ರಿ ಕಂಠ ಪೂರ್ತಿ ಮದ್ಯ ಸೇವಿಸಿ ಬಿಯರ್ ಬಾಟಲ್ ಜೊತೆಗೆ ಗ್ಯಾಂಗ್ ಅನ್ನು ಕರೆತಂದು ಪಿಜಿ ಸಿಬ್ಬಂದಿ ಶೇಖರ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆಗೆ ಯತ್ನಿಸಿ ಪಿಜಿ ಕಚೇರಿಯ ಮುಂಭಾಗದ ಗ್ಲಾಸ್ ಅನ್ನು ಪುಡಿ ಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಪಿಜಿ ಮುಂಭಾಗದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.