ಯಾವುದೇ ಶಕ್ತಿ ಬಂದರೂ ಕುಡಿಯುವ ನೀರು ಕೊಡುವುದನ್ನು ತಡೆಯಲು ಸಾಧ್ಯವಿಲ್ಲ

ಮಂಗಳವಾರ, 14 ಮಾರ್ಚ್ 2023 (16:05 IST)
ಜಗತ್ತಿನ ಯಾವುದೇ ಶಕ್ತಿ ಬಂದರೂ ಜನರಿಗೆ ಕುಡಿಯುವ ನೀರು ಕೊಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ರೋಣ ತಾಲ್ಲೂಕಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಮತ್ತು ರೋಣ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ. ನೆರವೇರಿಸಿ ಮಾತನಾಡಿದರು.
 
ಗದಗ ಜಿಲ್ಲೆಯ ಮೂರು ಪ್ರಮುಖ ನಗರಗಳಾದ ರೋಣ,  ಗಜೇಂದ್ರಗಡ  ಹಾಗೂ ನರೇಗಲ್ ಗೆ ಫ್ಲೋರೈಡ್ ಮುಕ್ತ ನೀರಿನ ಸೌಲಭ್ಯ ಕಲ್ಪಿಸಲಾಗಿದೆ .ರೋಣದಲ್ಲಿ  46 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ  ಯೋಜನೆಯಾಗಿದೆ. ನರೆಗಲ್ ಮತ್ತು  ಗಜೇಂದ್ರ ಗಡಕ್ಕೆ 69 ಕೋಟಿ ರೂ.ಗಳ ವೆಚ್ಚದಲ್ಲಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮೂರೂ ನಗರಗಳಿಗೆ ಶುದ್ಧವಾದ ಸಂಸ್ಕರಿಸಿದ ನೀರು ಒದಗಿಸುವ ಯೋಜನೆಯನ್ನು ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು. ಸಂತೋಷದೊಂದಿಗೆ ಕಳವಳವೂ ಆಗಿದೆ ಎಂದ ಮುಖ್ಯಮಂತ್ರಿಗಳು, ಈ ಯೋಜನೆ 2009 ರಲ್ಲಿ ಪ್ರಾರಂಭವಾದರೂ, ಮುಂದುವರೆಯಲಿಲ್ಲ. ಮಲಪ್ರಭ ನದಿ ನೀರನ್ನು ಶುದ್ದೀಕರಿಸಿ ಫ್ಲೋರೈಡ್ ಮುಕ್ತ ನೀರನ್ನು ಸರಬರಾಜು ಮಾಡಲು ಇಂದಿನಿಂದ ಪ್ರಾರಂಭಿಸಲಾಗಿದೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ