ಮಸೀದಿಗಳಲ್ಲಿ ಧ್ವನಿವರ್ಧಕಕ್ಕೆ ಅನುಮತಿಸೋ ಅಧಿಕಾರ ವಕ್ಫ್ ಮಂಡಳಿಗೆ ಇಲ್ಲ

ಬುಧವಾರ, 22 ಡಿಸೆಂಬರ್ 2021 (20:47 IST)
ಬೆಂಗಳೂರು: ರಾಜ್ಯದ ಮಸೀದಿಗಳಲ್ಲಿ ಅಳವಡಿಸಿರುವಂತ ಧ್ವನಿ ವರ್ಧಕವನ್ನು ತೆರವುಗೊಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಲಾಗಿತ್ತು. ಈ ನಿರ್ದೇಶನದಂತೆ ರಾಜ್ಯ ಪೊಲೀಸ್ ಇಲಾಖೆ ಕೂಡ ಸುತ್ತೋಲೆಯಲ್ಲಿ ಮಸೀದಿಗಳಲ್ಲಿ ಅಳವಡಿಸಿರುವಂತ ಧ್ವನಿವರ್ಧಕವನ್ನು ತೆರವುಗೊಳಿಸುವಂತೆಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿತ್ತು.
 
ಹೀಗಿದ್ದೂ ಅನೇಕ ಮಸೀದಿಗಳಲ್ಲಿ ಧ್ವನಿವರ್ಧಕವನ್ನು ಇನ್ನೂ ತೆರವುಗೊಳಿಸಿಲ್ಲ. ಈ ಬಗ್ಗೆ ಮಸೀಧಿಯ ಆಡಳಿತ ಮಂಡಳಿಯು, ಧ್ವನಿವರ್ಧಕ ಬಳಸೋದಕ್ಕೆ ವಕ್ಫ್ ಮಂಡಳಿಯಿಂದ ಅನುಮತಿ ಪಡೆದಿರೋದಾಗಿ ತಿಳಿಸುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆ ಮತ್ತೊಂದು ನೋಟಿಸ್ ಜಾರಿಗೊಳಿಸಿದ್ದು, ಧ್ವನಿವರ್ಧಕ ಬಳಕೆಗೆ ಅನುಮತಿಸೋ ಅಧಿಕಾರಿ ವಕ್ಫ್ ಮಂಡಳಿಕೆ ಇಲ್ಲ. ತೆರವುಗೊಳಿಸದೇ ಇದ್ದರೇ ಕಠಿಣ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದೆ.
 
ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಸದಂತೆ ಈಗಾಗಲೇ ಹೈಕೋರ್ಟ್ ನಿರ್ದೇಶನ ನೀಡಿದೆ. ಹೈಕೋರ್ಟ್ ಸೂಚನೆಯ ಹಿನ್ನಲೆಯಲ್ಲಿ ರಾಜ್ಯಾಧ್ಯಂತ ಮಸೀದಿಗಳಲ್ಲಿರುವ ಧ್ವನಿ ವರ್ಧಕ ತೆರವುಗೊಳಿಸುವಂತೆ ಪೊಲೀಸ್ ಮಹಾ ನಿರ್ದೇಶಕರು ಕೂಡ ಕೆಲ ತಿಂಗಳ ಹಿಂದೆಯೇ ಸುತ್ತೋಲೆಯಲ್ಲಿ ಆದೇಶಿಸಿದ್ದರು. ಹೀಗಿದ್ದೂ ರಾಜ್ಯದ ಅನೇಕ ಮಸೀಧಿಗಳಲ್ಲಿ ಇನ್ನೂ ಧ್ವನಿ ವರ್ಧಕಗಳನ್ನು ಬಳಕೆಯನ್ನು ಮಾಡಲಾಗುತ್ತಿದೆ.
 
ಈ ಬಗ್ಗೆ ಮಸೀಧಿಗಳ ಆಡಳಿತ ಮಂಡಳಿಯನ್ನು ಪೊಲೀಸರು ಪ್ರಶ್ನಿಸಿದ್ದಕ್ಕೆ ವಕ್ಫ್ ಮಂಡಳಿ ನಮಗೆ ಧ್ವನಿವರ್ಧಕ ಬಳಸೋದಕ್ಕೆ ಅವಕಾಶ ನೀಡಲಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಬೆಂಗಳೂರಿನ ಸಂಪಿಗೇಹಳ್ಳಿ ಠಾಣೆಯಿಂದ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಧ್ವನಿವರ್ಧಕ ಬಳಸೋದಕ್ಕೆ ಅನುಮತಿಸೋ ಅಧಿಕಾರ ವಕ್ಫ್ ಮಂಡಳಿಗೆ ಇಲ್ಲವೆಂದು ತಿಳಿಸಿದೆ.
 
ಇದಷ್ಟೇ ಅಲ್ಲದೇ ಅಧಿಕೃತ ಪ್ರಾಧಿಕಾರದಿಂದ ಮಾನ್ಯತೆಯನ್ನು ಧ್ವನಿವರ್ಧಕ ಬಳಸೋದಕ್ಕೆ ಅನುಮತಿ ಪಡೆಯದ ಹೊರತು, ಧ್ವನಿವರ್ಧಕ ಬಳಸುವಂತಿಲ್ಲ. ಒಂದು ವೇಳೆ ಹೈಕೋರ್ಟ್ ಆದೇಶ ಮೀರಿ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಸಿದ್ರೇ.. ಕಠಿಣ ಕ್ರಮದ ಎಚ್ಚರಿಕೆಯನ್ನು ಕೂಡ ಮತ್ತೊಮ್ಮೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ