ಕೋಟಿ ಕೋಟಿ ನಷ್ಟದಲ್ಲಿ ವಾಯುವ್ಯ ಸಾರಿಗೆ

ಸೋಮವಾರ, 30 ಜುಲೈ 2018 (15:22 IST)
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ವರ್ಷಕ್ಕೆ ಬರೋಬ್ಬರಿ ಕೋಟಿ ಕೋಟಿ ನಷ್ಟ ಅನುಭವಿಸುತ್ತಿದೆ. ಕೆ.ಎಸ್.ಆರ್.ಟಿ.ಸಿ ಲಕ್ಷ ಲಕ್ಷ ರೂ.ಗಳ ನಷ್ಟದಲ್ಲಿದೆ. ಈ ಕುರಿತು ಸಾರಿಗೆ ಸಚಿವ ಹೇಳಿದ್ದೇನು ಗೊತ್ತಾ?

ಬರೋಬ್ಬರಿ ವಾರ್ಷಿಕ 90 ಕೊಟಿ ನಷ್ಟ ಅನುಭವಿಸುತ್ತಿರುವುದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ. ಕೆಸ್.ಆರ್.ಟಿ.ಸಿ ತಿಂಗಳಿಗೆ ಉತ್ತರ ಕರ್ನಾಟಕ ಭಾಗದಲ್ಲಿ 30 ಲಕ್ಷ ನಷ್ಟದಲ್ಲಿದೆ. ಆದರೆ ಇದರಿಂದ ನೌಕರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹೀಗಂತ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿಕೆ ನೀಡಿದ್ದಾರೆ.

ನಷ್ಟ ಬರಿಸಲು ಬೇಕಾದಂತ ಎಲ್ಲ ಸಿದ್ಧತೆಗಳನ್ನು ಮಾಡಲಾಗುವುದು. ಸರಕಾರಿ ಶಾಲೆಗಳಿಗೆ ಮಾತ್ರ ಉಚಿತ ಪಾಸ್ ನೀಡಲು ಸರಕಾರ ಮುಂದಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿಕೆ ನೀಡಿದ್ದಾರೆ.

ಖಾಸಗಿ ಸಂಸ್ಥೆಯಲ್ಲಿನ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುವುದಿಲ್ಲ. ಖಾಸಗಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಿದರೆ ಸರಕಾರಿ ಶಾಲೆಗಳಿಗೆ ಹಿನ್ನೆಡಯಾಗುತ್ತದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ