ಸನಾತನ ಧರ್ಮವನ್ನು ಏನೂ ಮಾಡಲಾಗಲ್ಲ

ಭಾನುವಾರ, 24 ಸೆಪ್ಟಂಬರ್ 2023 (17:45 IST)
ಸನಾತನ ಧರ್ಮವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಹಿಂದೂ ವಿರೋಧಿಗಳ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ರು. ಸನಾತನ ಧರ್ಮ ಭಗವಂತನಿಂದ ನಿರ್ಮಾಣವಾಗಿದ್ದು, ನಿಮ್ಮಂಥ ಚಪ್ಪರ್​ಗಳಿಂದ ಅದನ್ನ ಏನು ಮಾಡಲು ಆಗಲ್ಲ ಎಂದು ಕಿಡಿಕಾರಿದ್ರು. ಇನ್ನು, ಸ್ವಾತಂತ್ರ್ಯ ತಂದುಕೊಟ್ಟು ಮಹಾನ್ ಪುರುಷರಿಗೆ ಅವಮಾನ ಮಾಡೊ ಕೆಲಸ ಆಗುತ್ತಿದೆ. ಸಾವರ್ಕರ್ ಚಪ್ಪಲಿ ಧೂಳಿಗೂ ಸಮನಾಗದೇ ಇರುವವರು ಅವರ ಬಗ್ಗೆ ಮಾತನಾಡುತ್ತಾರೆ. ಬರೀ ಒಂದು ವಾರ ಎತ್ತಿನ ಗಾಲಿಗೆ ಕಟ್ಟಿದಂತೆ ಕಟ್ಟಿದರೇ ಆ ಮಕ್ಕಳಿಗೆ ಅರ್ಥ ಆಗುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್, ಹಿಂದೂ ವಿರೋಧಿಗಳಿಗೆ ಕೌಂಟರ್ ಕೊಟ್ಟರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ