‘ಮಹಾ’ ಮಳೆ ಆರ್ಭಟದಿಂದ ಎಚ್ಚೆತ್ತ ಅಧಿಕಾರಿಗಳು ಮಾಡ್ತಿರೋದೇನು?
ಗುರುವಾರ, 1 ಆಗಸ್ಟ್ 2019 (17:53 IST)
ಮಹಾರಾಷ್ಟ್ರದಲ್ಲಿ ತಗ್ಗದ ವರುಣನ ಆರ್ಭಟದಿಂದಾಗಿ ಕೊನೆಗೂ ರಾಜ್ಯದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಮನೆ ಮನೆಗೆ ತೆರಳಿ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಜನರಲ್ಲಿ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಚಿಕ್ಕೋಡಿ ಎಸಿ ರವಿಂದ್ರ ಕರಲಿಂಗನವರ ಅವರ ನೇತೃತ್ವದಲ್ಲಿ ಮನವಿ ಮಾಡಲಾಗುತ್ತಿದೆ.
ಇಂಗಳಿ ಗ್ರಾಮದ ನಡುಗಡ್ಡೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ತಹಸೀಲ್ದಾರ್, ಎಸಿ, ಎಸ್ ಡಿ ಆರ್ ಎಫ್ ತಂಡಗಳಿಂದ ನಡುಗಡ್ಡಗೆ ಭೇಟಿ ನೀಡಲಾಗಿದೆ. ಹೆಚ್ಚುವರಿಯಾಗಿ ಎರಡು ಬೋಟ್ ಗಳೊಂದಿಗೆ ಎಸ್ ಡಿ ಆರ್ ಎಫ್ ತಂಡ ಆಗಮಿಸಿದೆ.
ಮುಂಜಾಗ್ರತಾ ಕ್ರಮವಾಗಿ 20 ಎಸ್ ಡಿ ಆರ್ ಎಫ್ ಸಿಬ್ಬಂದಿಯನ್ನ ಜಿಲ್ಲಾಡಳಿತ ಕರೆಸಿಕೊಂಡಿದ್ದು, ಸನ್ನದ್ಧವಾಗಿದೆ.