ಗುಡ್ ನ್ಯೂಸ್: ಓಲಾ, ಉಬರ್ ಗಳ ಬೆಲೆಯಲ್ಲಿ ವ್ಯತ್ಯಾಸ ಬರುತ್ತಿದೆಯೇ, ಬ್ರೇಕ್ ಹಾಕಲು ಮುಂದಾದ ಸರ್ಕಾರ

Krishnaveni K

ಶುಕ್ರವಾರ, 24 ಜನವರಿ 2025 (09:50 IST)
Photo Credit: X
ನವದೆಹಲಿ: ಬೆಂಗಳೂರಿನಂತಹ ಮಹಾನಗರಗಳಲ್ಲಿ ಓಲಾ, ಉಬರ್ ನಂತಹ ಆಪ್ ಆಧಾರಿತ ಕ್ಯಾಬ್ ಗಳಿಗೆ ಜನ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಈ ಕ್ಯಾಬ್ ಗಳ ಬೆಲೆ ಏರಿಕೆಯಲ್ಲಿ ವ್ಯತ್ಯಾಸವಾಗುತ್ತಿರುವುದಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಲು ತೀರ್ಮಾನ ಮಾಡಿದೆ.

ಇತ್ತೀಚೆಗಿನ ದಿನಗಳಲ್ಲಿ ಓಲಾ, ಉಬರ್ ನಂತಹ ಸಂಸ್ಥೆಗಳು ಆಂಡ್ರಾಯ್ಡ್ ಫೋನ್ ಗೊಂದು, ಐಫೋನ್ ಗೊಂದು ದರ ವಿಧಿಸುತ್ತಿದೆ. ಒಂದೇ ಕಂಪನಿಯು ಒಂದೇ ಸೇವೆಗೆ ವಿಭಿನ್ನ ದರ ವಿಧಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಹೀಗಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಎರಡೂ ಸಂಸ್ಥೆಗಳಿಗೆ ನೋಟಿಸ್ ನೀಡಿದೆ. ಆಪ್ ನಲ್ಲಿ ರೈಡ್ ಬುಕ್ ಮಾಡುವಾಗ ವಿಭಿನ್ನ ಸಾಫ್ಟ್ ವೇರ್ ನ ಫೋನ್ ಗಳಲ್ಲಿ ವಿಭಿನ್ನ ದರ ವಿಧಿಸುತ್ತಿರುವುದಕ್ಕೆ ಸ್ಪಷ್ಟೀಕರಣ ಕೋರಲಾಗಿದೆ. ಜೊತೆಗೆ ದರ ನಿಗದಿ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ನೋಟಿಸ್ ನೀಡಲಾಗಿದೆ.

ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಪೇಜ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದೆಹಲಿ ಉದ್ಯಮಿಯೊಬ್ಬರು ಈ ಬಗ್ಗೆ ಟ್ವೀಟ್ ಮೂಲಕ ಸರ್ಕಾರದ ಗಮನ ಸೆಳೆದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ