ಒಮಿಕ್ರಾನ್ ಸಾಮಾನ್ಯ ವೈರಲ್ ಜ್ವರ, ಜಾಗರೂಕತೆ, ಸುರಕ್ಷತೆ ಇದ್ದರೆ ಸಾಕು: ಸಿಎಂ ಯೋಗಿ ಆದಿತ್ಯನಾಥ್

ಮಂಗಳವಾರ, 4 ಜನವರಿ 2022 (18:22 IST)
ಒಮಿಕ್ರಾನ್ ಸಾಮಾನ್ಯ ಜ್ವರ ಅಷ್ಟೆ, ಕೋವಿಡ್-19 ಸಾಂಕ್ರಾಮಿಕ ಇನ್ನೇನು ಶೀಘ್ರವೇ ಕೊನೆಗಾಣಲಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಒಮಿಕ್ರಾನ್ ಅತಿ ವೇಗವಾಗಿ ಹರಡುತ್ತಿದೆ ಹೌದು, ಆದರೆ ಕೋವಿಡ್ ಎರಡನೇ ಅಲೆಗೆ ಹೋಲಿಸಿದರೆ ಒಮಿಕ್ರಾನ್ ರೂಪಾಂತರಿ ದುರ್ಬಲವಾಗಿದೆ. ಇದು ಸಾಮಾನ್ಯ ವೈರಲ್ ಜ್ವರ ಅಷ್ಟೆ. ಬೇರೆ ಎಲ್ಲ ಕಾಯಿಲೆಗಳ ರೀತಿ ಇದಕ್ಕೂ ಮುನ್ನೆಚ್ಚರಿಕೆ, ಜಾಗರೂಕತೆ ಅವಶ್ಯ ಇದೆ ಅಷ್ಟೆ ಎಂದಿದ್ದಾರೆ.
ಆತಂಕದಲ್ಲಿಯೇ ಎಷ್ಟೋ ಮಂದಿ ಪ್ರಾಣ ಬಿಡುತ್ತಿದ್ದಾರೆ. ಒಮ್ಮೆ ಒಮಿಕ್ರಾನ್ ಅಥವಾ ಕೊರೋನಾ ದೇಹದ ಒಳ ಹೊಕ್ಕರೆ ಸಾವು ಖಚಿತ ಎನ್ನುವ ಭೀತಿ ಇದೆ. ಇದು ಹೋಗಬೇಕು. ನಾವು ಮೊದಲು ಗಟ್ಟಿಯಾಗಬೇಕು. ಎಲ್ಲವನ್ನೂ ಎದುರಿಸಬೇಕು. ಸೂಕ್ತ ಮುಂಜಾಗ್ರತೆ ವಹಿಸಿದರೆ ಸೋಂಕು ತಾಗುವುದಿಲ್ಲ. ಸೋಂಕಿಗೆ ತುತ್ತಾದರೂ ಅದೊಂದು ಸಾಮಾನ್ಯ ಜ್ವರದಂತೆ ಪರಿಗಣಿಸಿ ಜಾಗರೂಕರಾಗಿದ್ದರೆ ಸಾಕು ಎಂದಿದ್ದಾರೆ.
ಕೋವಿಡ್ ಇದೀಗ ಅಂತಿಮ ಹಂತದಲ್ಲಿದೆ. ಇನ್ನೇನು ಶೀಘ್ರವೇ ಕೋವಿಡ್ ಕೊನೆಗೊಳ್ಳುತ್ತದೆ. ಎರಡನೇ ಅಲೆಯಲ್ಲಿ ಕಂಡಷ್ಟು ತೀವ್ರತೆ ಒಮಿಕ್ರಾನ್‌ನಲ್ಲಿ ಇಲ್ಲ. ಹೆದರುವ ಅವಶ್ಯ ಇಲ್ಲ. ಆದರೆ ಜಾಗರೂಕರಾಗಿ ಇರುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ