ಸೆ.26 ರಂದು ನಟ ದರ್ಶನ್‌ಗೆ ನೋಟಿಸ್ ಜಾರಿ: ಜಿಲ್ಲಾಧಿಕಾರಿ

ಶನಿವಾರ, 24 ಸೆಪ್ಟಂಬರ್ 2016 (15:38 IST)
ರಾಜಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರಿಗೆ ಸೆಪ್ಟೆಂಬರ್ 26 ರಂದು ನೋಟಿಸ್ ಜಾರಿ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಶಂಕರ್ ತಿಳಿಸಿದ್ದಾರೆ. 
 
ಬೆಂಗಳೂರಿನ ರಾಜರಾಜೇಶ್ವರಿನಗರ ಬಳಿ ರಂಗೋಲಿಹಳ್ಳ ಒತ್ತುವರಿಯಾಗಿದ್ದು, ಈ ಹಳ್ಳದ ವ್ಯಾಪ್ತಿಯ ಹಲಗವಡೇರಹಳ್ಳಿಯ ಸರ್ವೆ ನಂಬರ್ 55 ರಲ್ಲಿ ನಟ ದರ್ಶನ್ ಮನೆ ನಿರ್ಮಿಸಿದ್ದಾರೆ. ಹಳ್ಳ ಒತ್ತುವರಿಯಾದ ಸ್ಥಳದಲ್ಲಿ ನಟ ದರ್ಶನ ಮನೆ ನಿರ್ಮಿಸಿರುವ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ನೀಡಲು ಸರಕಾರ ಮುಂದಾಗಿದೆ. 
 
ಹಾಗೂ ರಾಜಕಾಲುವೆ ಒತ್ತುವರಿಗೆ ಸಹಕರಿಸಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಂಕರ್ ಸ್ಪಷ್ಟಪಡಿಸಿದ್ದಾರೆ. 
 
ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮನೆ ಒತ್ತುವರಿಯಾದ ಸ್ಥಳದಲ್ಲಿದ್ದರೇ ನಾನೇ ಮನೆ ತೆರವುಗೊಳಿಸುತ್ತೇನೆ. ಕಾನೂನು ಎಲ್ಲರಿಗೂ ಒಂದೇ ಎಂದು ಈ ಹಿಂದೆ ನಟ ದರ್ಶನ ತಿಳಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ