ರಾಜ್ಯದ ಅನೇಕ ಮಕ್ಕಳಿಗೆ ಅನ್ಲೈನ್ ಕ್ಲಾಸ್ ಸಿಗತ್ತಿಲ್ಲದ -ಹೈಕೋರ್ಟ್ ವಿಭಾಗೀಯ ಪೀಠ

ಶುಕ್ರವಾರ, 16 ಜುಲೈ 2021 (17:25 IST)
ರಾಜ್ಯದ ಬಹುತೇಕ ಮಕ್ಕಳು ಅನ್ಲೈನ್ ಕ್ಲಾಸ್ ಸಿಗದೇ ವಂಚಿತರಾಗುತ್ತಿದ್ದಾರೆ.ಬಡತನ ಮತ್ತು ಆರ್ಥಿಕ ಹಿಂದುಳಿಕೆ ಮಕ್ಕಳ ಶಿಕ್ಷಣ ನಿಲ್ಲಿಸಲು ಕಾರಣ ಆಗಬಾರದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.ಬಡಮಕ್ಕಳಿಗೆ ಆನ್ಲೈನ್ ಕ್ಲಾಸ್ಗೆ ಉಚಿತ, ನೆಟ್, ಟ್ಯಾಬ್ & ಲ್ಯಾಪ್ ಟಾಪ್  ಪಿಐಎಲ್ ಕೋರಿದೆ.ನ್ಯಾ. ಬಿ ವಿ ನಾಗರತ್ನ ಮತ್ತು  ನ್ಯಾ. ಹಂಚಾಟೆ ಸಂಜೀವ್‌ಕುಮಾರ್‌ ರ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ಶಿಕ್ಷಣ ಮುಂದುವರಿಕೆ ನಿಲ್ಲಿಸಲು ಬಡತನ ಕಾರಣವಾಗಬಾರದು.ಶಾಲೆಗಳನ್ನು ಪುನಾರಂಭಿಸುವ ನಿರ್ಧಾರವನ್ನ ಲೆಕ್ಕಿಸದೆ ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವ ತುರ್ತು ಅವಶ್ಯಕತೆಯಿದೆ. ಟೆಕ್ನಿಕಲ್ ಸಮಸ್ಯೆ ಮತ್ತು ಸೌಲಭ್ಯ ಪಡೆಯಲಾಗದವರ ಬಗ್ಗೆ ಗಮನ ಹಾರಿಸಬೇಕು.ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ ಹೊಂದಿರುವ ಕಾರ್ಯತಂತ್ರವನ್ನ ದಾಖಲೆ ಸಮೇತಸಲ್ಲಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿಂದ ನಿರ್ದೇಶನ ನೀಡಿದೆ.ಇನ್ನೂ ಕೋರ್ಟ್ ಅರ್ಜಿಯ ಮುಂದಿನ ವಿಚಾರಣೆ‌ಯನ್ನ  ಜುಲೈ 29ಕ್ಕೆ ಮುಂದೂಡಿಕೆ ಮಾಡಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ