ಪ್ರಿಯೆಗಾಗಿ ಟವರ್ ಏರಿದ ಪಾಗಲ್ ಪ್ರೇಮಿ
ಪ್ರೇಮ ವೈಫಲ್ಯ ಹಿನ್ನೆಲೆ ಯುವಕನೊಬ್ಬ ಮೊಬೈಲ್ ಟವರ್ ಏರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಅಡ್ಯಾರು ಎಂಬಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟಳು ಅಂತ ಆರೋಪಿಸಿ ಮೊಬೈಲ್ ಟವರ್ ಏರಿದ್ದ. ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ ಯುವಕನನ್ನು ಕೆಳಗಿಳಿಸಲು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಹರಸಾಹಸ ಪಟ್ಟರು. ಕೊನೆಗೆ ಪ್ರೀತಿಸಿದ ಹುಡುಗಿಯೇ ಬಂದು ಕರೆದ ಬಳಿಕ ಪ್ರೇಮಿ ಟವರ್ ಇಳಿದು ತನ್ನ ಪ್ರಿಯತಮೆ ಜೊತೆ ತೆರಳಿದ್ದಾನೆ.