ಶಾಲಾ ಶುಲ್ಕ ಕಡಿಮೆ ಮಾಡಲು ಆದೇಶ ಕೊಡಿ: ಶಿಕ್ಷಣ ಸಚಿವರಿಗೆ ಪೋಷಕರ ಆಗ್ರಹ

ಶನಿವಾರ, 6 ಜೂನ್ 2020 (09:06 IST)
ಬೆಂಗಳೂರು: ಈ ವರ್ಷ ಶಾಲೆ ಆರಂಭವಾಗುವುದು ಯಾವಾಗ ಎಂಬುದೇ ಗೊತ್ತಿಲ್ಲ. ಆದರೆ ಖಾಸಗಿ ಶಾಲೆಗಳು ಮಾತ್ರ ಪ್ರತೀ ವರ್ಷದಂತೇ ಪೂರ್ತಿ ವರ್ಷದ ಶಾಲಾ ಶುಲ್ಕ ವಸೂಲಿ ಮಾಡಲು ಪ್ರಾರಂಭಿಸಿವೆ. ಇದರ ಬಗ್ಗೆ ಶಿಕ್ಷಣ ಸಚಿವರಿಗೆ ಪೋಷಕರು ಮನವಿ ಮಾಡಿದ್ದಾರೆ.


ಶಾಲೆ ಆರಂಭ ಯಾವಾಗ ಎಂದೇ ಗೊತ್ತಿಲ್ಲ. ಒಂದು ವೇಳೆ ತಡವಾಗಿ ಆರಂಭವಾದರೂ ಹೆಚ್ಚಿನ ದಿನ ನಷ್ಟವಾಗುವುದು ಗ್ಯಾರಂಟಿ. ಹಾಗಿದ್ದರೂ ಪೂರ್ತಿ ವರ್ಷದ ಶುಲ್ಕ ವಸೂಲಿ ಮಾಡುವುದೇಕೆ? ಈ ಬಗ್ಗೆ ಶಾಲೆಗಳಿಗೆ ಸುತ್ತೋಲೆ ನೀಡಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಪೋಷಕರು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.

ಲಾಕ್ ಡೌನ್ ವೇಳೆ ಎಷ್ಟೋ ಮಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಇದರ ನಡುವೆ ಶಾಲೆ ಶುಲ್ಕ ಪೋಷಕರಿಗೆ ದುಬಾರಿಯಾಗಿ ಪರಿಣಮಿಸಿದೆ. ಖಾಸಗಿ ಶಾಲೆಗಳಂತೂ ಈಗಿನಿಂದಲೇ ಈ ವರ್ಷದ ಶುಲ್ಕ ಪಾವತಿಸಲು ಒತ್ತಡ ಹೇರುತ್ತಿವೆ. ಇದು ಸರಿಯಲ್ಲ ಎಂಬುದು ಪೋಷಕರ ವಾದ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ