ಪೇಜಾವರ ಶ್ರೀಗಳು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತಾಂತ್ರಿಕ ದೋಷ: ತುರ್ತು ಲ್ಯಾಂಡಿಂಗ್

ಶುಕ್ರವಾರ, 23 ಮಾರ್ಚ್ 2018 (20:13 IST)
ಉಡುಪಿಯ ಪೇಜಾವರ ಶ್ರೀಗಳು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತಾಂತ್ರಿಕ ದೋಷದಿಂದ ಹೊಳಲಿನ ಸಾಧನಾ ಶಾಲೆಯ ಆವರಣದಲ್ಲಿ ದಿಡೀರ್ ಲ್ಯಾಂಡ್ ಆಯಿತು. ಶ್ರೀಗಳು ಹೊಸಪೇಟೆಯಲ್ಲಿ ಜರುಗಿದ ಸರ್ವಧರ್ಮ ರಥಚಲಾವಣೆ ಉದ್ಘಾಟನಾ ಕಾರ್ಯಕ್ರಮಕ್ಕರ ಹೋಗಿದ್ದರೆನ್ನಲಾಗಿದೆ. 
ಹೊಸಪೇಟೆಯಿಂದ ಉಡುಪಿಗೆ ಪ್ರಯಾಣಿಸುತ್ತಿರುವಾಗ ಹೆಲಿಕ್ಯಾಪ್ಟರ ಎ.ಸಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಈವೇಳೆ ಚಾಲಕನು ತನ್ನ  ಜಾಣತನದಿಂದ ಹೆಲಿಕ್ಯಾಪ್ಟರನ್ನು ದಿಡೀರನೆ ಹೊಳಲಿನ‌ ಸಾಧನಾ ಶಾಲಾ ಮೈದಾನದಲ್ಲಿ ಲ್ಯಾಂಡ್ ಮಾಡಿದ್ದಾನೆ. 
ಇದರಿಂದ ಸಂಭವಿಸಬಹುದಾದ ಬಹುದಾದ ಅನಾಹುತವೊಂದು ತಪ್ಪಿದಂತಾಗಿದೆ. ಹೆಲಿಕ್ಯಾಪ್ಟರ್ ದಢಿರನೆ ಲ್ಯಾಂಡ್ ಆಗುತ್ತಲೆ ಶಾಲಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ದೌಡಾಯಿಸಿ ನಡೆದು ಶ್ರೀಗಳ ಕ್ಷೇಮವನ್ನು ವಿಚಾರಿಸಿದ್ದಾರೆ.
 
 ವಿಷಯ ತಿಳಿಯುತ್ತಲೆ ಹೊಳಲು ಹಾಗೂ ಮೈಲಾರಗಳಿಂದ ಜನರು ಒಡೊಡಿಬಂದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಶಾಲಾ ಮೈದಾನದಲ್ಲಿ ತಂಗಿದ್ದ ಶ್ರೀಗಳು ತಾಂತ್ರಿಕ ದೋಷ ಸರಿಯಾದ ನಂತರ ಮತ್ತೆ ಸುರಕ್ಷಿತವಾಗಿ ಪ್ರಯಾಣ ಬೆಳಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ