ಶಿವಮೊಗ್ಗ ರಾಜಕೀಯ: ಗೀತಾ ಶಿವರಾಜಕುಮಾರ್ ಹೇಳಿದ್ದೇನು ಗೊತ್ತಾ?

ಶುಕ್ರವಾರ, 23 ಮಾರ್ಚ್ 2018 (17:49 IST)
ಶಿವಮೊಗ್ಗದಲ್ಲಿ ಈ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಏಳರ ಪೈಕಿ ಆರು ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆ ಇದೆ ಎಂದು ಗೀತಾ ಶಿವರಾಜಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ರಾಜಕೀಯದಿಂದ ಎಂದಿಗೂ ಹಿಂದೆ ಸರಿದಿಲ್ಲ. ನನ್ನ ಸ್ವಂತ ಕೆಲಸಗಳ ಒತ್ತಡದಿಂದ ಪಕ್ಷದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗಿಯಾಗಿಲ್ಲ ಅಷ್ಟೇ ಎಂದಿದ್ದಾರೆ. 
 
ನನಗೆ ನನ್ನ ಹಾಗೂ ನಾಯಕರ ಕೆಲಸಗಳು ಮುಖ್ಯವೇ ಹೊರತು, ಎದುರಾಳಿ ಯಾರಿದ್ದಾರೆ ಎಂದು ನೋಡುವುದಿಲ್ಲ ಎಂದು ಹೇಳಿದ್ದಾರೆ. ಕುಮಾರ್ ಬಂಗಾರಪ್ಪ ಬಿಜೆಪಿಯಿಂದ ಸ್ಪರ್ದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಕುಟುಂಬವೇ ಬೇರೆ ಪಕ್ಷವೇ ಬೇರೆ ಎಂದಿದ್ದು, ನನಗೆ ಮಧು ಬಂಗಾರಪ್ಪ ಗೆಲುವು ಮಾತ್ರ ಮುಖ್ಯ ಎಂದು ಕಡ್ಡಿ ಮುರಿದಂತೆ ಹೇಳಿ ಗಮನ ಸೆಳೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ