ಇಡೀ ಊರಿನ ಜನರೇ ರೇಬಿಸ್ ಇಂಜೆಕ್ಷನ್ ಪಡೆದುಕೊಂಡ್ರು…

ಮಂಗಳವಾರ, 4 ಸೆಪ್ಟಂಬರ್ 2018 (18:54 IST)
ಯುವಕನೊಬ್ಬನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಊರಿನ ಜನರೆಲ್ಲ ರೇಬಿಸ್ ಇಂಜೆಕ್ಷನ್ ಪಡೆದುಕೊಂಡ ಘಟನೆ ನಡೆದಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಶಿತ್ ಎಂಬ ಯುವಕ ರೇಬಿಸ್ ನಿಂದಾಗಿ ಸಾವನ್ನಪ್ಪಿದ್ದನು. ಆತನ ಮೃತದೇಹವನ್ನು ಪುತ್ತೂರು ತಾಲೂಕಿನ ಇಚ್ಲಂಪಾಡಿಯ ಮನೆಗೆ ತಂದಾಗ ವೈದ್ಯರ ಸಲಹೆ ಮೀರಿ ಮೃತದೇಹವನ್ನು ಮನೆಯವರು ತೆರೆದಿದ್ದಾರೆ. ಹೀಗಾಗಿ ಬಾಕ್ಸ್ ನಿಂದ ತೆರೆದ ಮೃತದೇಹದಿಂದ ರಕ್ತ ಮನೆಯ ಅಂಗಳದಲ್ಲಿ ಚೆಲ್ಲಿತ್ತು.

ಇದು ಊರಿನ ಜನರ ಗಮನಕ್ಕೆ ಬಂದಿದೆ. ಹೀಗಾಗಿ ರೇಬಿಸ್ ವೈರಾಣು ಭಯದಿಂದಾಗಿ ಈಗ ಇಡೀ ಊರಿನ ಜನರು ಇಂಜೆಕ್ಷನ್ ಪಡೆದುಕೊಂಡಿದ್ದಾರೆ. ಮೃತನ ಕುಟುಂಬಕ್ಕೆ ವೈದ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆದರೂ ಊರಿನ ಜನರು ಭಯದಲ್ಲಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ