ಮಾರುಕಟ್ಟೆಯಲ್ಲಿ ಜನರ ಖರೀದಿ ಭರಾಟೆ ಜೋರು

ಬುಧವಾರ, 22 ಮಾರ್ಚ್ 2023 (14:05 IST)
ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ .ಯುಗಾದಿ ಅಂದರೆ ಅದು ಹೊಸ ವರ್ಷ ಹೊಸ ವರ್ಷವನ್ನು ಸಡಗರದಿಂದ ಆಚರಿಸಲು ಸಿಟಿಜನರು ಸಜ್ಜಾಗಿದ್ದು,ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ್ರೂ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.ನಗರದ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರ ಜೋರಿದ್ದು,ಹೂ, ಹಣ್ಣು, ತರಕಾರಿ, ತಳಿರು ತೋರಣಗಳಿಗೆ ಮಾರುಕಟ್ಟೆಗಳಲ್ಲಿ ನಗರವಾಸಿಗಳು ಮುಗಿಬಿದ್ದಿದ್ದಾರೆ.
 
ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ ನಲ್ಲಿ ಜನವೋ ಜನ.ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು  ಜನರು ಮುಂದಾಗಿದ್ದಾರೆ.ಹಬ್ಬದ ಹಿನ್ನಲೆ ಅಗತ್ಯ ವಸ್ತುಗಳ ಬೆಲೆ ಡಬಲ್ ಆಗಿದೆ.ಹೂಗಳ ಬೆಲೆ ಅಂತೂ ಗಗನಕ್ಕೇರಿದೆ.ಆದ್ರೂ ಹಬ್ಬ ಆಚರಿಸಲೇಬೇಕಲ್ವಾ‌ ಅಂತಾ ವಸ್ತುಗಳನ್ನ ಜನರು ಕೊಂಡುಕೊಳ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ