ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲ್ಲೆ ಗಗನಕ್ಕೇರುತ್ತಿರೋ ತರಕಾರಿ ಬೆಲೆಗಳು

ಭಾನುವಾರ, 27 ಆಗಸ್ಟ್ 2023 (15:44 IST)
ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ದಿನ ಬಳಕೆ ವಸ್ತುಗಳ ದರ ಹೆಚ್ಚಾಗ್ತಿದೆ.ಮಾರುಕಟ್ಟೆಗಳಲ್ಲಿ ದಿನಬಳಕೆ ವಸ್ತುಗಳ ದರ ಕೇಳಿ ಗ್ರಾಹಕರಿಗೆ ಶಾಕ್ ಆಗಿದ್ದಾರೆ.ಇಷ್ಟು ದಿನ ಟೊಮೇಟೊ ಆಯ್ತು ಇದೀಗ ಬೇಳೆ ಕಾಳುಗಳು ಹಾಗೂ ಈರುಳ್ಳಿ ದರದಲ್ಲಿ ಏರಿಕೆ ಆಯ್ತು.ಇದೀಗ ದಿನದಿಂದ ದಿನಕ್ಕೆ ಕ್ರಮೇಣವಾಗಿ ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಆಗ್ತಾ ಇದೆ.ರಾಜ್ಯದಲ್ಲಿ ಮೇಲಿಂದ ಮೇಲೆ ಬೆಲೆ ಏರಿಕೆಗಳಿಂದ ಜನ ತತ್ತರಿಸುತ್ತಿದ್ದಾರೆ.ರಾಜ್ಯದಲ್ಲಿ ಮುಂಗಾರು ಕೊರತೆ ಇಂದ ದರ ಏರಿಕೆ ಬರೆಗೆ ಮೂಲ ಕಾರಣವಾಗಿದೆ.ಮಾರುಕಟ್ಟೆಯಲ್ಲಿ ಕ್ರಮೇಣವಾಗಿ ಈರುಳ್ಳಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ.
 
ಮೊದ್ಲು 20 ರೂ ಕೆಜಿ ಇದ್ದ ಈರುಳ್ಳಿ ಇದೀಗ ಕೆಜಿಗೆ 50 ರಿಂದ 60 ರೂಪಾಯಿಯಾಗಿದೆ.ಇದರ ಜೊತೆ ಬೇಳೆ ಕಾಳುಗಳ ಬೆಲೆಯಲ್ಲೂ ಕೂಡ ದಿಢೀರ್ ಏರಿಕೆಕಂಡಿದೆ.ಹೆಸರುಕಾಳು ಈ ಮೊದಲು 100 ರೂಪಾಯಿ ಇತ್ತು. ಆದ್ರೆ ಈಗ 30 ರುಪಾಯಿ ಹೆಚ್ಚಳವಾಗಿದ್ದು ಸದ್ಯದ ಬೆಲೆ 130 ರೂಪಾಯಿ ಆಗಿದೆ.ತೊಗರಿ ಬೇಳೆ ಹಿಂದೆ 90 ರೂಪಾಯಿ ಇದ್ದಿದ್ದು, ಈಗ ಬರೋಬ್ಬರಿ 163 ರೂಪಾಯಿ ಆಗಿದೆ.ಹೆಸರು ಬೇಳೆ 95 ರೂಪಾಯಿ ಇದ್ದಿದ್ದು, ಈಗ 110ರೂಪಾಯಿಯಾಗಿದೆ.ಬಟಾಣಿ 60 ರೂಪಾಯಿ ಇದ್ದಿದ್ದು 90 ರೂಪಾಯಿ,ಕಾಬುಲ್ ಕಡಲೆ 120 ರೂಪಾಯಿ ಇದ್ದಿದ್ದು, 160 ರೂಪಾಯಿ ಆದ್ರೆ ಉದ್ದಿನ ಬೇಳೆ 100 ರೂಪಾಯಿ ಇದ್ದಿದ್ದು, 110 ರೂಪಾಯಿ ಆಗಿದೆ.ಮುಂದಿನ ದಿನಗಳಲ್ಲೂ ಇದೇರೀತಿಯಾಗಿ ರಾಜ್ಯದಲ್ಲಿ ಮಳೆ ಕೈ ಕೊಟ್ಟರೆ ಮತ್ತಷ್ಟು ಬೆಲೆಗಳು ಏರಿಕೆಯಾಗಲಿವೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ